ಗ್ರಾಪಂ ಚುನಾವಣೆಗೆ ಅಧಿಸೂಚನೆ
ಕಂಪ್ಲಿ: ಕಂಪ್ಲಿಯ ಸುಗ್ಗೇನಹಳ್ಳಿ ಗ್ರಾಪಂ ಸದಸ್ಯ ವೀರೇಶ್ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ ಎಂದು ಚುನಾವಣಾಕಾರಿ ಉಪತಹಸೀಲ್ದಾರ್ ಕೆ. ಬಾಲಪ್ಪ ತಿಳಿಸಿದ್ದಾರೆ. ಆ. 7ರ ತನಕ ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಜು. 24 ನಾಮಪತ್ರ ಸಲ್ಲಿಸಲು ಕಡೆ ದಿನವಾಗಿದ್ದು, ಜು. 25 ನಾಮಪತ್ರಗಳ ಪರಿಶೀಲನೆ ಜರುಗುವುದು. ಜು. 27 ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಆ. 4ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ. ಆ. 7ರಂದು ಹೊಸಪೇಟೆಯಲ್ಲಿ ಮತಗಳ ಎಣಿಕೆ ಕಾರ್ಯ ಜರುಗಲಿದೆ.