ಶ್ರೀನಿವಾಸ್‌ಗೆ ಸಿಂಚನಾ ಪ್ರಶಸ್ತಿ
ಹೂವಿನಹಡಗಲಿ: ಇಲ್ಲಿನ ಸಿಂಚನಾ ಪ್ರತಿಷ್ಠಾನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಸ್ಥಾಪಿಸಿರುವ ಸಿಂಚನಾ ಕಾವ್ಯ ಪ್ರಶಸ್ತಿಗೆ ಹಾವೇರಿಯ ಯುವಕವಿ ಬಿ. ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಗದಗಿನ ಲಡಾಯಿ ಪ್ರಕಾಶನ ಪ್ರಕಟಿಸಿರುವ ಇವರ ಉರಿವ ಒಲೆಯ ಮುಂದೆ ಕಾವ್ಯ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಡಾ. ಅನಸೂಯಾ ಕಾಂಬಳೆ, ವಿಕ್ರಮ್ ವಿಸಾಜಿ ಸ್ಪರ್ಧೆಯ ಒಮ್ಮತದ ತೀರ್ಪು ನೀಡಿದ್ದಾರೆ. ರು. 5000 ನಗದು ಒಳಗೊಂಡಿರುವ ಸಿಂಚನಾ ಕಾವ್ಯ ಪ್ರಶಸ್ತಿಯನ್ನು ಆಗಸ್ಟ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡುವುದಾಗಿ ತಾಲೂಕು ಕಸಾಪ ಅಧ್ಯಕ್ಷ ಸುರೇಶ ಅಂಗಡಿ ತಿಳಿಸಿದ್ದಾರೆ.