ಕಳ್ಳನ ಬಂಧನ: ಚಿನ್ನ ವಶ
ಬಳ್ಳಾರಿ: ಕಳ್ಳನೊಬ್ಬನನ್ನು ಬಂಧಿಸಿ, ಆತನಿಂದ ರು. 1.52 ಲಕ್ಷ ಬೆಲೆಬಾಳುವ 103.017 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರ ನಗರದ ಎಸ್ಪಿ ಸರ್ಕಲ್ನಲ್ಲಿ ನಡೆದಿದೆ. ಬಂಧಿತ ಆರೋಪಿ ಬಳ್ಳಾರಿ ಭಾಸ್ಕರ್. ಕೌಲ್ಬಜಾರ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಈತ, ಬಳ್ಳಾರಿಯ ಎಸ್ಪಿ ಸರ್ಕಲ್ನಲ್ಲಿ ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೌಲ್ಬಜಾರ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಹಾಗೂ ಸಿಬ್ಬಂದಿ ಆತನನ್ನು ಹಿಡಿದು, ರು. 2,57,925 ಮೌಲ್ಯದ 103.017 ಗ್ರಾಮ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಂಡಿಕೊಂಡು ವಿಚಾರಣೆ ನಡೆಸಿದಾಗ ತಾನು ಮತ್ತು ತನ್ನ ಸ್ನೇಹಿತ ಹಾರೂನ್ ರಷೀದ್ ಸೇರಿ ಬಂಗಾರ ಆಭರಣಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.