ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗುರುಪೌರ್ಣಿಮೆ: ನಾಳೆ ವಿಶೇಷ ಕಾರ್ಯಕ್ರಮ

Lingaraj Badiger
Updated On : 20 Jul 2013, 11:46 am

ಬಳ್ಳಾರಿ: ಇಲ್ಲಿನ ಗಾಂಧಿನಗರದ ಶ್ರೀ ರಾಮಕೃಷ್ಣ ವಿವೇಕಾನಂದ ಕೇಂದ್ರದಲ್ಲಿ ಗುರುಪೌರ್ಣಿಮೆ ನಿಮಿತ್ತ ಜು. 22ರಂದು ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಗುರುಪೌರ್ಣಿಮೆ ಅಂಗವಾಗಿ 6.30ರಿಂದ ಸುಪ್ರಭಾತ ಹಾಗೂ ವೇದಘೋಷ, 7ರಿಂದ ವಿಶೇಷ ಪೂಜೆ ಹಾಗೂ ಶ್ರೀ ವಿಷ್ಣು ಸಹಸ್ರನಾಮ, ಸಾಮೂಹಿಕ ಪಾರಾಯಣ, ಗ್ರಂಥಪಠಣ, ಭಜನೆ ಕಾರ್ಯಕ್ರಮ ಹಾಗೂ ಅಷ್ಟೋತ್ತರ ಮಹಾಮಂಗಳಾರತಿ ಜರುಗಲಿವೆ.
ಚಾತುರ್ಮಾಸದ ಅಂಗವಾಗಿ ಈಗಾಗಲೇ ಶ್ರೀ ರಾಮಕೃಷ್ಣ ವಿವೇಕಾನಂದ ಕೇಂದ್ರದಲ್ಲಿ ವಿಶೇಷ ಪ್ರವಚನ ಆರಂಭವಾಗಿದ್ದು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪರಿಂದ 'ಶರಣ ಚರಿತಾಮೃತ' ವಿಷಯ ಕುರಿತು ಜು. 22ರ ವರೆಗೆ ಉಪನ್ಯಾಸ ನೀಡಲಿದ್ದಾರೆ. ಜು. 23ರಿಂದ 30ರ ವರೆಗೆ ನಗರದ ಎಂಬಿಎಸ್‌ಎಲ್ ಶಾಲೆಯ ಮುಖ್ಯೋಪಾಧ್ಯಾಯ ಕಾಳಪ್ಪ ಪತ್ತಾರ್ 'ಸಾಧನ ಮಾರ್ಗ' ವಿಷಯ ಕುರಿತು ಉಪನ್ಯಾಸ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement