ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವ್ಯವಹಾರದಲ್ಲಿ ಸಾಮಾಜಿಕ ಬದ್ಧತೆಯಿರಲಿ

Lingaraj Badiger
Updated On : 20 Jul 2013, 12:07 pm

ಹೊಸಪೇಟೆ: ವ್ಯವಹಾರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಇಂಡಿಯನ್ ಆಯಿಲ್ ಕಂಪನಿಯ ಎಸ್‌ಡಿಆರ್ ಎಂಸಿ ವ್ಯವಸ್ಥಾಪಕ ಪಳನಿ ಕುಮಾರ್ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ, ಕೊಪ್ಪಳ ಜಿಲ್ಲೆಯ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಮುಖ ಡೀಲರ್ಸ್‌ಗಳ ಸಮಾವೇಶದ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು.
ದಿನದ 24 ಗಂಟೆಗಳ ಕಾಲ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಪಡೆದುಕೊಳ್ಳಬೇಕು. ಹಸಿರು ವಲಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಹಾಗೂ ಗ್ರಾಹಕರ ಉತ್ತಮ ಸೇವೆಗೆ ಮುಂದಾಗಬೇಕೆಂದರು. ಕಂಪನಿಯು ಇನ್ನೂ ಹೆಚ್ಚಿನ ಸೇವೆ ಒದಗಿಸಲು ಅದ್ಯತೆ ನೀಡಲಿದೆ  ಎಂದರು.
ಬಿಜಾಪುರ ಐಓಸಿಎಲ್ ಅಧಿಕಾರಿ ವೈಭವ ಚಂದನ್ ಬಳ್ಳಾರಿಯ ಐಓಸಿಎಲ್ (ಆರ್‌ಎಸ್) ಮ್ಯಾನೇಜರ್ ಸಿ.ಎಸ್. ಕೃಷ್ಣಸ್ವಾಮಿ, ಅಂಬರ್ ಅಹ್ಮದ್, ಎಸ್‌ಆರ್ ಎಎಂ ಮುದ್ದು ಮೋಹನರಾಜ್, ಮ್ಯಾನೇಜರ್ ನಮ ಶಿವಂ, ಎ.ಎಂ. ವಿಜಯಕುಮಾರ್ ಸಮಾವೇಶದಲ್ಲಿ ಭಾಗವಹಿಸಿದ್ದರು. ನಗರದ ಉದ್ಯೋಗ ಪೆಟ್ರೋಲ್ ಬಂಕ್ ಎಚ್‌ಎಸ್‌ಡಿ ಸೂಪರ್ ಮಾರಾಟಗಾರ ಪ್ರಶಸ್ತಿ ಪಡೆದುಕೊಂಡಿತು. ಕೂಡ್ಲಿಗಿಯ ವಿವೇಕಾನಂದ ದೇವರಮನಿ ಪೆಟ್ರೋಲ್ ಬಂಕ್ ಅತ್ಯುತ್ತಮ ಆಟೊಮೇಷನ್ ಪ್ರಶಸ್ತಿ ಪಡೆದುಕೊಂಡಿತು.
--
ನೀರು ಕರ ಏರಿಕೆಗೆ ಖಂಡನೆ
ಬಳ್ಳಾರಿ: ನೀರಿನ ಕರವನ್ನು ರು. 100 ರಿಂದ ರು. 175 ಗಳಿಗೆ ಏರಿಸಿರುವ ಮಹಾನಗರ ಪಾಲಿಕೆಯ ಕ್ರಮವನ್ನು ಬಳ್ಳಾರಿ ನಾಗರಿಕ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಡಿ.ನಾಗಲಕ್ಷ್ಮಿ ಮತ್ತು ಆರ್. ಸೋಮಶೇಖರಗೌಡ ಅವರು, ಕಳೆದ ಬಾರಿ ಆಡಳಿತದಲ್ಲಿದ್ದ ಮಹಾನಗರ ಪಾಲಿಕೆಯು ನೀರಿನ ಕರವನ್ನು ಏಕಾಏಕಿಯಾಗಿ ರು. 60-ರಿಂದ ರು. 100ಗಳಿಗೆ ಏರಿಸಿ ಜನತೆಯ ವಿರೋಧಕ್ಕೆ ಗುರಿಯಾಗಿತ್ತು. ಈ ಏರಿಕೆಯು ಸಾರ್ವಜನಿಕರಿಗೆ ಹೊರೆಯಾಗಿತ್ತು. ಹೀಗಿರುವಾಗ ಪ್ರಸ್ತುತ ಇದ್ದಕ್ಕಿದ್ದಂತೆ ಶೇ.75 ರಷ್ಟು ನೀರಿನ ಕರ ಏರಿಸುವುದರ ಮೂಲಕ ಪಾಲಿಕೆಯು ನೀರಿನ ವ್ಯಾಪಾರ ಮಾಡಲಿಕ್ಕೆ ಹೊರಟಿದೆಯೇ ಎನ್ನುವ ಸಹಜ ಪ್ರಶ್ನೆ ನಾಗರಿಕರಲ್ಲಿ ಕೇಳಿಬರುತ್ತದೆ. ನೀರಿನ ದರ ಏರಿಕೆಯ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement