ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮತದಾನ ಶಾಂತಿಯುತ

Mainashree
Updated On : 23 Jul 2013, 11:10 am

ಬಳ್ಳಾರಿ:  ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಸೋಮವಾರ ನಗರದಲ್ಲಿ ಚುನಾವಣೆ      ನಡೆಯಿತು.
ನಗರದ ಮುನ್ಸಿಪಲ್ ಹೈಸ್ಕೂಲ್ ತರಗತಿ ಕೋಣೆಗಳನ್ನು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬಳ್ಳಾರಿ ಪೂರ್ವ ಹಾಗೂ ಪಶ್ಚಿಮ ವಲಯದ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4 ರವರೆಗೆ ಮತ ಚಲಾಯಿಸಿದರು. ಬೆಳಗ್ಗೆಯಿಂದಲೇ ಮತದಾರರು ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸಿದರು.
ಬಳ್ಳಾರಿಯ ಒಟ್ಟು ವಿವಿಧ ಇಲಾಖೆಗಳ 62 ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳ ಪೈಕಿ 27 ಅವಿರೋಧ ಆಯ್ಕೆ ನಡೆದಿದ್ದು, ಉಳಿದ 35 ಸ್ಥಾನಗಳಿಗೆ ಚುನಾವಣೆ ನಡೆಯಿತು. 77 ಅಭ್ಯರ್ಥಿಗಳು ಕಣದಲ್ಲಿದ್ದು, 4100 ನೌಕರರು ಹಕ್ಕು ಚಲಾಯಿಸಿದರು.
ವಿವಿಧ ಇಲಾಖೆಗಳ ಪೈಕಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಸ್ಥಾನಗಳಿದ್ದು, ಪ್ರಾಥಮಿಕ ಶಾಲೆ ಶಿಕ್ಷಕರಿಗೆ 4 ಸ್ಥಾನಗಳು, ಪ್ರೌಢಶಾಲೆ 2 ತಾಂತ್ರಿಕ ಶಿಕ್ಷಣ ಇಲಾಖೆ, ಪದವಿ ಕಾಲೇಜು, ರೇಷ್ಮೆ, ಲಿಪಿ ನೌಕರರು (ಶಿಕ್ಷಣ ಇಲಾಖೆ), ಸಮಾಜ ಕಲ್ಯಾಣ ಮತ್ತು ಹಿಂದುಳಿದ ಅಲ್ಪಸಂಖ್ಯಾತ, ಜಿಪಂ, ಆಹಾರ ಮತ್ತು ನಾಗರಿಕ ಸರಬರಾಜು, ಸಹಕಾರ, ಪಶುಸಂಗೋಪನೆ ತಲಾ 1 ಸ್ಥಾನಗಳು, ಶಿಕ್ಷಣ, ಆರೋಗ್ಯ, ನ್ಯಾಯಾಂಗ, ಸಣ್ಣ ನೀರಾವರಿ, ವಾಣಿಜ್ಯ ತೆರಿಗೆ, ಕೃಷಿ 2 ಸ್ಥಾನಗಳು, ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕಂದಾಯ ಇಲಾಖೆಗೆ 3 ಸ್ಥಾನಗಳಿದ್ದು, ಎಲ್ಲ ಇಲಾಖೆಗಳ ನೌಕರರು ಮತ ಚಲಾಯಿಸಲು ಆಗಮಿಸಿದ್ದರು.  ಸರ್ಕಾರಿ ನೌಕರರು ದ್ವಿಚಕ್ರ, ನಾಲ್ಕು ಚಕ್ರ ವಾಹನಗಳಲ್ಲಿ ಮತಗಟ್ಟೆಗೆ ಆಗಮಿಸಿ, ಕ್ಯೂನಲ್ಲಿ ನಿಂತು ಉತ್ಸಾಹದಿಂದ ಹಕ್ಕನ್ನು ಚಲಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement