ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯಾರ್ಥಿ ಸಂಘಕ್ಕೆ ಚುನಾವಣೆ

Mainashree
Updated On : 23 Jul 2013, 11:11 am

ಹೂವಿನಹಡಗಲಿ:  ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯ 2013-14ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಶನಿವಾರ ಜರುಗಿತು.
8 ಮಂದಿ ಚುನಾವಣಾ ಅಧಿಕಾರಿಗಳು, 18 ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರು ಕಾರ್ಯನಿರ್ವಹಿಸಿದರು. 12 ಸ್ಥಾನಗಳಿಗೆ 35 ವಿದ್ಯಾರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದರು. ಮುದ್ರಿತ ಮತಪತ್ರ, ಮತಪೆಟ್ಟಿಗೆ ಬೆರಳಿಗೆ ಹಚ್ಚುವ ಶಾಹಿ ಇತರೆ ಚುನಾವಣಾ ಪರಿಕರ ಮತದಾನದಲ್ಲಿ ಬಳಸಲಾಯಿತು. ಯಾವುದೇ ಆಮಿಷಗಳಿಗೆ ಒಳಗಾಗದೆ 250 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಹಿಸಿದರು. ಪ್ರೌಢಶಾಲಾ ಹಂತದಲ್ಲಿಯೇ ಪ್ರಜಾಪ್ರಭುತ್ವದ ಪರಿಕಲ್ಪನೆ, ಮತದಾನ, ಚುನಾವಣೆ ನಡೆಯುವ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ವಿನೂತನ ಕಾರ್ಯಕ್ರಮ ಇದಾಗಿತ್ತು. ಜೆಎಸ್‌ಎಸ್ ಬಿ.ಈಡಿ. ಪ್ರಶಿಕ್ಷಣ ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕ ವರ್ಗ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುರೇಶ ಅಂಗಡಿ ಸಂಚಾಲಕ ಎಸ್.ದ್ವಾರಕೇಶ ರೆಡ್ಡಿ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ನಾನು 8ನೇ ತರಗತಿಯಲ್ಲಿಯೇ ಮತದಾನ ಮಾಡಿದ್ದು, ನನಗೆ ಸಂತಸ ತಂದಿದೆ. ಚುನಾವಣೆ ಬಗ್ಗೆ ಟಿವಿ, ಪತ್ರಿಕೆಯಲ್ಲಿ ಓದಿದ್ದೆ, ನಮ್ಮ ಶಾಲೆಯಲ್ಲಿಯೇ ಚುನಾವಣೆ ನಡೆದು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೂಲ ಆಶಯ ತಿಳಿಯಿತು ಎಂದು ಗೌತಮಿ ಹೇಳುತ್ತಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement