ಶಿಕ್ಷಣ ಕ್ಷೇತ್ರದ ಉನ್ನತಿಗೆ ಕೈ ಜೋಡಿಸಲಿ
ಹೊಸಪೇಟೆ: ಸರ್ಕಾರದ ಜತೆಗೆ ಸ್ಥಳೀಯ ಸಂಘ- ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಉನ್ನತಿಗೆ ಕೈ ಜೋಡಿಸಿದಾಗ ಮಾತ್ರ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಇಓ ಪಿ. ಸುನಂದಾ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶೂ, ಪಠ್ಯೋಪಕರಣ, ಸ್ಕೌಟ್ಸ್, ಗೈಡ್ಸ್ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ವ ಶಿಕ್ಷಣ ಅಭಿಯಾನದಡಿ ಈ ಯೋಜನೆಯನ್ನು ರೋಟರಿ ಕ್ಲಬ್ ಹಮ್ಮಿಕೊಂಡಿದ್ದು, ಕ್ಲಬ್ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ. ಹೀಗಾಗಿ ಕೆಲ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕ್ಲಬ್ನಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಸಂಪತ್ಕುಮಾರ್ ಮತ್ತು ಮನೋಹರ್ ಗಣೇಶ್ ಎಂಟರ್ ಪ್ರೈಸಸ್, ಪಿ.ಎಸ್. ಬಾಲಣ್ಣ, ಶ್ಯಾಮ್ ಚೌಧರಿ ಸೇರಿದಂತೆ ಇತರರು ವಿದ್ಯಾರ್ಥಿಗಳಿಗೆ ಶೂ, ಪಠ್ಯೋಪಕರಣ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಗುರುತಿನ ಚೀಟಿ ಸೇರಿದಂತೆ ಶಾಲೆಗೆ ವಿದ್ಯುತ್ ಸಲಕರಣೆಗಳ ಪೂರೈಕೆಗೆ ದೇಣಿಗೆ ನೀಡಿದರು. ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರು. 10 ಸಾವಿರ ಸ್ಕಾಲರ್ಶಿಷ್ ವಿತರಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ ರಾವ್, ಕಾರ್ಯದರ್ಶಿ ಸೈಯದ್ ಮಹಮದ್, ಸದಸ್ಯರಾದ ಸೈಯದ್ ನಾಜಿಮುದ್ದೀನ್, ವೈ. ನಿವಾಸರಾವ್, ಎನ್.ಎಂ. ಅಗ್ನಿಹೋತ್ರಿ, ಅಬ್ದುಲ್ ಹಕ್, ಡಾ. ಮುನಿವಾಸುದೇವ ರೆಡ್ಡಿ, ವಿಜಯ ಸಿಂಧಗಿ, ಅಶ್ವಿನ್ ಕೊತ್ತಂಬರಿ ಹಾಗೂ ಇನ್ನರ್ ವ್ಹೀಲ್ ಅಧ್ಯಕ್ಷೆ ಡಾ. ಮಾಧವಿ, ಕಾರ್ಯದರ್ಶಿ ಮೇಘನಾ ಮಂಜುನಾಥ, ಜಯಶ್ರೀ ರಾಜಗೋಪಾಲ್, ಮಣಿ, ವಿಜಯ ಅಗ್ನಿಹೋತ್ರಿ, ನಂದಿನ ಚಿಕ್ಕಮಠ ಸೇರಿದಂತೆ ಇತರರು ಭಾಗವಹಿಸಿದ್ದರು. ಕಾಲೇಜಿನ ನಿವೃತ್ತ ಪ್ರಾಚಾರ್ಯ ವೀರಭದ್ರಪ್ಪ, ಪ್ರಾಚಾರ್ಯ ಸರಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಅವರನ್ನು ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.