ಸುದ್ದಿ ಸಂಕ್ಷೇಪ
ಗುರುಪೌರ್ಣಿಮೆ ಆಚರಣೆ
ಬಳ್ಳಾರಿ: ಇಲ್ಲಿನ ವೆಂಕಟೇಶ್ವರ ನಗರದ ಶ್ರೀ ಅಭಯ ವರದಾಂಜನೇಯ ದೇವಸ್ಥಾನದ ಆವರಣದಲ್ಲಿ ಗುರುಪೌರ್ಣಿಮೆಯನ್ನು ಭಾನುವಾರ ಆಚರಿಸಲಾಯಿತು. ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲ್ಯಾಣ ಸ್ವಾಮಿಗಳು ಆಶೀರ್ವಚನ ನೀಡಿದರು. ವಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸಿದ್ದರಾಮಯ್ಯ ಸ್ವಾಮಿ ಗುರುಪೌರ್ಣಿಮೆ ಕುರಿತು ಮಾತನಾಡಿದರು. ದೇವಸ್ಥಾನದ ಅಧ್ಯಕ್ಷ ಪಿ.ಧನುಂಜಯ ಕಾರ್ಯಕ್ರಮ ಉದ್ಘಾಟಿಸಿದರು. ಕಣೇಕಲ್ ಎರ್ರಿಸ್ವಾಮಿ ಸೇರಿದಂತೆ ಸ್ಥಳೀಯರು ಇದ್ದರು. ಪಿ.ಎಂ. ನಟರಾಜ್ ಪ್ರಾರ್ಥಿಸಿದರು. ಇಸ್ವಿ ಪಂಪಾಪತಿ ನಿರೂಪಿಸಿದರು. ಸಂಗಪ್ಪ, ಪಿ.ಎಂ. ದೊಡ್ಡಬಸಯ್ಯ ವಂದಿಸಿದರು.
ಶಿಬಿರ ಸಮಾರೋಪ
ಬಳ್ಳಾರಿ: ನಗರದ ಶ್ರೀಗುರು ತಿಪ್ಪೇರುದ್ರ ಮಹಾವಿದ್ಯಾಲಯದ ಎನ್ಎಸ್ಎಸ್ ಎ ಮತ್ತು ಬಿ ಘಟಕಗಳ ವತಿಯಿಂದ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಎ ಘಟಕದ ಕಾರ್ಯಕ್ರಮ ಅಧಿಕಾರಿ ಜಿ. ನಾಗರಾಜ ಹಾಗೂ ಬಿ ಘಟಕದ ಅಧಿಕಾರಿ ಬಿ. ಮಂಜುನಾಥ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶರಣ ಮಲ್ಲಪ್ಪ ತಾತ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಜಿ.ಟಿ ಕಾಲೇಜಿನ ಅಧ್ಯಕ್ಷ ಎಸ್.ಎನ್. ರುದ್ರಪ್ಪ, ಕಾಲೇಜಿನ ಪ್ರಾಚಾರ್ಯ ಕೆ. ರಾಮ್ಕಿರಣ್, ಮಂಜುನಾಥ, ಗಮಕ ಕಲಾವಿದ ರಂಗಣ್ಣ ಕರೂರು, ಕರ್ಚೇಡಿನ ರೈತ ಮುಖಂಡ ತಿಮ್ಮನಗೌಡ, ಮುಖ್ಯೋಪಾಧ್ಯಾಯ ವಿಶ್ವನಾಥ, ಶಿಕ್ಷಕ ವೆಂಕಟರಮಣ, ಗ್ರಾಪಂ ಸದಸ್ಯರಾದ ಗುಡದಯ್ಯ, ತಾಯಪ್ಪ, ಉಲ್ತಿ ಸಿದ್ದನಗೌಡ, ಸಿದ್ದನಗೌಡ, ಪ್ರಭುಲಿಂಗಯ್ಯಸ್ವಾಮಿ, ಬಿ. ಹನುಮಂತಪ್ಪ, ಸಣ್ಣ ಮರೇಗೌಡ, ಬಸವರಾಜಪ್ಪ, ಕರ್ಚಿ ಸಣ್ಣಪ್ಪ ಹಾಗೂ ಕಾಲೇಜಿನ ಉಪನ್ಯಾಸಕರಾದ ಎರೇಶ್, ಪ್ರಭಾಕರ್, ಮನೋಹರ್, ತಿಪ್ಪೇರುದ್ರ ಇತರರು ಭಾಗವಹಿಸಿದ್ದರು. ನೀಲಕಂಠಪ್ಪ ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯ ಕೆ. ರಾಮ್ಕಿರಣ್ ವಂದಿಸಿದರು.
ಕರವೇಯಿಂದ ಬಾಗಿನ
ಹೊಸಪೇಟೆ: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಕರವೇ ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ, ನಗರ ಘಟಕದ ಅಧ್ಯಕ್ಷ ಜೆ. ಸಲೀಂ, ಸ್ಥಳೀಯ ಮುಖಂಡರಾದ ಎಸ್.ಪಿ. ಅಮರೇಶಪ್ಪ, ಗುಜ್ಜಲ್ ಎಸ್. ಆಂಜಿನೇಯಲು, ರಾಮಚಂದ್ರಪ್ಪ, ಮಹಿಳಾ ಘಟಕದ ತಾಲೂಕು ಅಧ್ಯಕ್ಷ ಹೈನಾವತಿ, ಸುಮ, ಶೈಲಜಾ, ಶಕುಂತಲ, ಲಕ್ಷ್ಮಿ, ರಂಗಮ್ಮ ಸೇರಿದಂತೆ ಇತರರು ಇದ್ದರು.
ರಜತ ಮಹೋತ್ಸವದ ಪೂರ್ವಭಾವಿ ಸಭೆ
ಬಳ್ಳಾರಿ: ಶ್ರೀ ಸಿದ್ಧೇಶ್ವರ ಅನುದಾನಿತ ಶಾಲಾ ಶಿಕ್ಷಕರ ಸಂಘದ ರಜತ ಮಹೋತ್ಸವದ ಪೂರ್ವಭಾವಿ ಸಭೆ ಇಲ್ಲಿನ ಬಸವೇಶ್ವರ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಗುರುವಾರ ಜರುಗಿತು. ನಿವೃತ್ತ ಪ್ರಾಚಾರ್ಯ ಜಿ.ಎಂ. ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೆ. ಬಸವನಗೌಡ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನಬಸಯ್ಯಸ್ವಾಮಿ, ನಿವೃತ್ತ ಮುಖ್ಯೋಪಾಧ್ಯಾಯ ಉಮಾಪತಿ ಶರ್ಮ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರುದ್ರಯ್ಯ, ಖಜಾಂಚಿ ಡಿ.ಬೆಟ್ಟಪ್ಪ, ವೀರಶೈವ ಸಮಾಜದ ಮುಖಂಡ ಆಸ್ಪಾಲಿ ಕರಿಬಸಪ್ಪ, ವೀ.ವಿ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಿ. ಮಹಾಲಿಂಗಯ್ಯ, ಶ್ರೀ ಸಂಗಮೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು. ಎಸ್ಎಂವಿವಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಸ್. ಮುಧೋಳ ಪ್ರಾರ್ಥಿಸಿದರು. ಶ್ರೀ ಸಿದ್ಧೇಶ್ವರ ಅನುದಾನಿತ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಆರ್.ಎಚ್.ಎಂ ಚನ್ನಬಸವಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೀರದ ಸೂಗಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಂ. ಗಂಗಾಧರಯ್ಯ ನಿರೂಪಿಸಿದರು.