ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ: ಚರಂಡಿ ನೀರು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಸಿಂಪಡಿಸಿದ ಮಹಾನಗರ ಪಾಲಿಕೆ

Mainashree
Updated On : 27 Jul 2013, 11:29 am

ಬಳ್ಳಾರಿ: ನಗರದ ಡಬಲ್ ರಸ್ತೆಯಲ್ಲಿ ಚರಂಡಿ ನೀರು ನಿಂತಿರುವ ಕುರಿತಾಗಿ 'ಕನ್ನಡಪ್ರಭ' ಪತ್ರಿಕೆ 'ಚರಂಡಿ ನೀರಿನಿಂದಾಗಿ ಕಾಣದಾಗಿದೆ ರಸ್ತೆ' ಶೀರ್ಷಿಕೆ ಅಡಿಯಲ್ಲಿ ಅವ್ಯವಸ್ಥೆಯ ಕುರಿತಾಗಿ ಶುಕ್ರವಾರ ವರದಿ ಮಾಡಿದ ಹಿನ್ನೆಲೆಯಲ್ಲಿ ಸ್ಪಂದಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ನಿಂತಿರುವ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಬ್ಲಿಚಿಂಗ್ ಪೌಡರ್ ಸಿಂಪಡಿಸಿದ್ದಾರೆ.
ನಗರದ ಹಳೆ ಬಸ್ ನಿಲ್ದಾಣದಿಂದ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕಾಸ್ಮೋಪೊಲಿಟನ್ ಕ್ಲಬ್‌ಬಿಲ್ಡಿಂಗ್ ಮುಂದುಗಡೆ ಇರುವ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯ ಮೇಲೆ ನಿಂತು ರಸ್ತೆ ಚರಂಡಿಯಂತಾಗಿತ್ತು. ಇದರಿಂದಾಗಿ ರಸ್ತೆಯಲ್ಲಿ ಹೋಗುವವರಿಗೆ ಹಾಗೂ ವಾಹನ ನಿಲುಗಡೆ ಮಾಡುವವರಿಗೆ ತೀವ್ರ ಸಮಸ್ಯೆಯಾಗಿತ್ತು.
ಇದನ್ನು ಕನ್ನಡಪ್ರಭ ವರದಿ ಮಾಡಿ ಪಾಲಿಕೆ ಗಮನಕ್ಕೆ ತಂದಿತ್ತು. ಶುಕ್ರವಾರ ಬೆಳಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಮಿಕರನ್ನು ಕರೆತಂದು ರಸ್ತೆಯ ಮೇಲಿನ ಚರಂಡಿ ನೀರನ್ನು ತೆರವುಗೊಳಿಸಿ, ಬ್ಲಿಚಿಂಗ್ ಪೌಡರ್ ಸಿಂಪಡಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ನಗರದಲ್ಲಿ ನೈರ್ಮಲ್ಯದ ಕುರಿತಾಗಿ ಆದ್ಯತೆ ನೀಡಬೇಕಾಗಿದೆ. ಮಳೆ ಬಂದಾಗ ಇಲ್ಲಿ ಇಂಥ ಅವ್ಯವಸ್ಥೆಯಾಗುತ್ತಿದ್ದು, ಶಾಶ್ವತ ಪರಿಹಾರದ ಕಡೆಗೆ ಮಹಾನಗರ ಪಾಲಿಕೆಯ ಆಯುಕ್ತರು ಒತ್ತು ನೀಡಬೇಕಾಗಿದೆ. ಈ ಕುರಿತಾಗಿ ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ ಅವರು ಮಾತನಾಡಿ, 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ನೋಡಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿ, ಸ್ವಚ್ಛಗೊಳಿಸಲಾಗಿದೆ. ಇಂಥ ಸಮಸ್ಯೆಗಳಲ್ಲಿ ಸ್ಪಂದನೆ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement