ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಗರಿಬೊಮ್ಮನಹಳ್ಳಿ: ಮುರಿದ ಬಸ್ ಶೆಲ್ಟರ್

Mainashree
Updated On : 27 Jul 2013, 11:26 am

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿನ ಹಳೇ ಬಸ್ ನಿಲ್ದಾಣದ ಕಾಂಪೌಂಡ್ ಮತ್ತು ಬಿಸಿಲು, ಮಳೆ, ಗಾಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ನಿರ್ಮಿಸಿರುವ ಶೆಲ್ಟರ್‌ನ್ನು ಹಾಡಹಗಲೇ ಒಡೆದು ಹಾಕಿದರು ಇಲ್ಲಿನ ಗ್ರಾಮ ಪಂಚಾಯಿತಿ ಆಡಳಿತವಾಗಲಿ, ತಾಲೂಕಾಡಳಿತವಾಗಲಿ ಇದನ್ನು ಗಮನಿಸಿಲ್ಲ. ಇದು ಸಹಜವಾಗಿ ಸಾರ್ವಜನಿಕರಲ್ಲಿ ಸ್ಥಳಿಯಾಡಳಿತದ ನಿರ್ಲಕ್ಷ್ಯತನದ ಬಗ್ಗೆ ತೀವ್ರ ಅಸಮಾಧಾನ ಮೂಡಿಸಿದೆ.
ಹಳೇ ಬಸ್ ನಿಲ್ದಾಣಕ್ಕೆ ನಿತ್ಯ ಬಂದು ಹೋಗುವ ನೂರಾರು ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಬಂದಿಳಿಯುವ ಸಾವಿರಾರು ಪ್ರಯಾಣಿಕರ ತಾತ್ಕಾಲಿಕ ವಿಶ್ರಾಂತಿ ಪಡೆಯುವ ಸಲುವಾಗಿ ಚಿಂತ್ರಪಳ್ಳಿ ಗ್ರಾಪಂ ವತಿಯಿಂದ 1993ರ ಸುಮಾರಿನಲ್ಲಿ ಎರಡು ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿತ್ತು. ಹೊಸ ಬಸ್ ನಿಲ್ದಾಣ ಆರಂಭವಾಗುವವರೆಗೂ ಈ ಎರಡು ಶೆಲ್ಟರ್‌ಗಳೇ ನಿಜವಾದ ಬಸ್ ನಿಲ್ದಾಣವಾಗಿ ಕಾರ್ಯನಿರ್ವಹಿಸಿದ್ದವು. ಈಗಲೂ ಈ ಶೆಲ್ಟರ್‌ಗಳು ಬಿಸಿಲು, ಮಳೆ, ಗಾಳಿಯಿಂದ ನಿತ್ಯವೂ ಪ್ರಯಾಣಿಕರನ್ನು ರಕ್ಷಿಸುತ್ತಿವೆ.
ಗೋಡೆ ಹೊಡೆದರು: ಆದರೆ ಇತ್ತೀಚಿಗೆ ಹಳೇ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತು ಬಸ್ ಶೆಲ್ಟರ್ ಹಿಂದುಗಡೆ  ಸಾಕಷ್ಟು ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಈಗ್ಗೆ ತಲೆ ಎತ್ತುತ್ತಿರುವ ವಾಣಿಜ್ಯ ಸಂಕೀರ್ಣಗಳಿಗೆ ಬಸ್ ಶೆಲ್ಟರ್‌ಗೆ ಅಳವಡಿಸಿರುವ ರಕ್ಷಣಾ ಗೋಡೆ ಅಡ್ಡವಾಗಿದೆ. ಗೋಡೆ ಅಡ್ಡವಾಗಿರುವುದರಿಂದ ತಮ್ಮ ಅಂಗಡಿಗಳಿಗೆ ಗಿರಾಕಿಗಳು ಬಂದೋಗಲು ಅನಾನುಕೂಲವಾಗುತ್ತದೆ ಎಂಬ ಕುಂಟುನೆಪ ಮುಂದೆ ಮಾಡಿಕೊಂಡು ಶೆಲ್ಟರ್‌ನ ಉದ್ದಗಲಕ್ಕೂ ರಕ್ಷಣಾ ಗೋಡೆಯನ್ನು ಒಡೆದು ಹಾಕಿ ತಮ್ಮ ಅಂಗಡಿಗಳಿಗೆ ನೇರ ರಸ್ತೆ ಸಂಪರ್ಕವನ್ನು ಅಂಗಡಿಗಳ ಮಾಲಿಕರು ರಾಜರೋಷವಾಗಿ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದ ಕಾಂಪೌಂಡ್‌ನ್ನು ಹೊಡೆದು ಹಾಕಿದರು ಸ್ಥಳಿಯಾಡಳಿತ ಮಾತ್ರ ಮೌನವಾಗಿದೆ.
ಶೆಲ್ಟರ್‌ಗೂ ಕುತ್ತು: ಬಸ್ ಶೆಲ್ಟರ್ ಹಿಂದೆಯೇ ಇದೀಗ ಹೊಸದೊಂದು ವಾಣಿಜ್ಯ ಸಂಕೀರ್ಣ ತಲೆ ಎತ್ತಿದ್ದು, ಸಂಕೀರ್ಣದಲ್ಲಿನ ಅಂಗಡಿಗಳು ಆರಂಭವಾದರೆ ಸಹಜವಾಗಿ ಬಸ್ ಶೆಲ್ಟರ್ ಅಡ್ಡವಾಗುತ್ತದೆ. ಅಡ್ಡವಾಗಿರುವ ಶೆಲ್ಟರ್‌ನ್ನು ಹೊಡೆದು ಹಾಕಿ ದಾರಿ ಕಂಡುಕೊಂಡಿದ್ದಾರೆ ವಾಣಿಜ್ಯ ಮಳಿಗೆಯವರು. ಇಷ್ಟೆಲ್ಲಾ ಮಾಡಿದ್ದರೂ ಸ್ಥಳಿಯಾಡಳಿತ ಮಾತ್ರ ತನ್ನ ದಿವ್ಯ ಮೌನಕ್ಕೆ ಶರಣಾಗಿದ್ದು, ಸ್ಥಳಿಯರ ಆಕ್ರೋಶ್ಕ್ಕೆ ಕಾರಣಾಗಿದೆ. ಹೀಗಾಗಿ ಹಳೇ ಬಸ್ ನಿಲ್ದಾಣದ ಸಾರ್ವಜನಿಕ ಆಸ್ತಿ ಕಂಡ, ಕಂಡವರ ಕೈಗೆ ಸಿಕ್ಕು ನಾಶವಾಗುತ್ತಿದೆ. ಈಗಲಾದರೂ ಪಂಚಾಯಿತಿಯವರು ಎಚ್ಚೆತ್ತುಕೊಂಡು ಬಸ್ ಶೆಲ್ಟರ್ ಹಾಗೂ ರಕ್ಷಣಾ ಗೋಡೆಯನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು ಎನ್ನುತ್ತಾರೆ ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೆಂದ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement