ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪತ್ರಿಕೋದ್ಯಮಕ್ಕೂ ವಿದೇಶಿ ಖಾಸಗಿ ಬಂಡವಾಳ

Lingaraj Badiger
Updated On : 29 Jul 2013, 11:40 am

ಹೂವಿನಹಡಗಲಿ: ಪತ್ರಿಕೋದ್ಯಮ ಬಂಡವಾಳ ಶಾಹಿಗಳ ಪಾಲಾಗುತ್ತಿದ್ದು, ಈ ಕ್ಷೇತ್ರಕ್ಕೂ ವಿದೇಶಿ ಖಾಸಗಿ ಬಂಡವಾಳ ಹೂಡಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಗಳು ತನ್ನ ಪಾವಿತ್ರ್ಯ ಕಾಯ್ದುಕೊಳ್ಳಲಿ ಎಂದು ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಭಾನುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಕ್ಷೇತ್ರ ಒಂದೇ ಕಲುಷಿತಗೊಂಡಿಲ್ಲ, ಇದನ್ನು ಸೇರಿಕೊಂಡು ಪತ್ರಿಕೋದ್ಯಮವೂ ಕಲುಷಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪತ್ರಕರ್ತರು ವಾಸ್ತವಾಂಶಗಳೊಂದಿಗೆ ಸತ್ಯ, ನೇರ, ನಿಷ್ಠುರ ವರದಿಗಾರಿಕೆಯಿಂದ ಸಮಾಜವನ್ನು ತಿದ್ದುವ ಕೆಲಸ ಮಾಡಲಿ. ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲ ರಂಗಗಳಲ್ಲಿಯೂ ತಪ್ಪು ಸಹಜ. ಆದರಿಂದ ಅವುಗಳ ಕುರಿತು ಮೊದಲೇ ಚರ್ಚಿಸಿ ತಿದ್ದಿಕೊಳ್ಳುವಲ್ಲಿ ವಿಫಲರಾದ ಬಗ್ಗೆ ವಿಶೇಷ ಸಮಗ್ರ ವರದಿ ಮೂಲಕ ಎಚ್ಚರಿಸಬೇಕು. ನಿತ್ಯ ಹೊಸ ಹೊಸ ಸುದ್ದಿಯ ಹುಡುಕಾಟದಲ್ಲೇ ತಮ್ಮ ಬದುಕನ್ನು ಮರೆಯುವ ಪತ್ರಕರ್ತರಿಗೆ ಪತ್ರಿಕೊದ್ಯಮ ನಡೆಸುವ ಮಾಲಕರು ಸರಿಯಾದ ಸಂಬಳ, ಗೌರವ ಧನ ನೀಡಿ ಅವರ ಖಾಸಗಿ ಬದುಕನ್ನು ಸುಧಾರಿಸಬೇಕೆಂದರು.
ಒಬ್ಬ ವ್ಯಕ್ತಿ ಗುರಿ ಬೇಡ: ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಸಮಾಜ ಸುಧಾರಣೆ ಸಾಧ್ಯ. ಪತ್ರಿಕೆಗಳ ಸುದ್ದಿಗಳು ರಚನಾತ್ಮಕ ಹಾಗೂ ಸಲಹೆ ನೀಡುವಂತಹ ಟೀಕೆಗಳಾಗಲಿ. ತಪ್ಪು ಮಾಡಿರುವ ಸರ್ಕಾರವನ್ನು ಕಿತ್ತು ಹಾಕುವ ಶಕ್ತಿ ಮಾಧ್ಯಮಕ್ಕಿದೆ. ಮೌಲ್ಯಾಧಾರಿತ ವರದಿಗಾರಿಕೆಯಿಂದ ಸರಿದಾರಿಗೆ ತರಬೇಕು. ಆದರೆ ಒಬ್ಬ ವ್ಯಕ್ತಿಯನ್ನೇ ಗುರಿಯಾಗಿ ಇಟ್ಟುಕೊಂಡು ಮಾಡುವ ವರದಿಗಾರಿಕೆಗೆ ಬೆಲೆ ಸಿಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎ.ಬಿ. ವಿಜಯಕುಮಾರ ಮಾತನಾಡಿದರು. ಪತ್ರಿಕೋದ್ಯಮದ ಬಗ್ಗೆ ಪತ್ರಕರ್ತ ಟಿ.ಎನ್. ಷಣ್ಮುಖ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಿಂಗಟಾಲೂರು ಏತನೀರಾವರಿ ಯೋಜನೆ ಎಇ ಓದೋಗಂಗಪ್ಪ, ಕಾಂತೇಬೆನ್ನೂರು ಜನಪದ ಕಲಾವಿದೆ ಸೋಬಾನೆ ಬಸಮ್ಮ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶಿವಮೂರ್ತಿ, ಬಸ್ ಚಾಲಕ ಬಸವರಾಜ ಪಾಟೀಲ್,  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಎಂ.ಎಸ್. ಶಿಲ್ಪಾ, ಲಕ್ಯಾನಾಯ್ಕ, ಟಿ. ಸಾನ, ಪಿ. ವೆಂಕಟೇಶ ಇವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಲಪಾಟಿ ಅಕ್ಬರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ್ ಚಿದಾನಂದ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಇದ್ದರು. ಎಂ.ಪಿ.ಎಂ. ಶಿವಪ್ರಕಾಶ ನಿರೂಪಿಸಿದರು. ನಿಂಗಪ್ಪ ಮೈಲಾರ ಸ್ವಾಗತಿಸಿದರು. ಎಸ್. ಲಿಂಗರಾಜ ಪ್ರಾಸ್ತಾವಿಕ ಮಾತನಾಡಿದರು. ಎಚ್. ಚಂದ್ರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement