ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗುಟ್ಕಾ ಸಾಗಿಸುತ್ತಿದ್ದ ಲಾರಿ ವಶ

Lingaraj Badiger
Updated On : 30 Jul 2013, 10:58 am

ಕೂಡ್ಲಿಗಿ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದ್ದರೂ ಕಾಳಸಂತೆಯಲ್ಲಿ ಕದ್ದುಮುಚ್ಚಿ ಗುಟ್ಕಾ ಸರಬರಾಜು ಮಾಡುತ್ತಿರುವ ಸಂಗತಿ ಬಯಲಿಗೆ ಬಂದಿದೆ. ತಾಲೂಕಿನ ವಿರೂಪಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಲಾರಿಯೊಂದು  ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಪಾನ್ ಮಸಾಲ ಮೂಟೆಗಳ ಜತೆ ನಿರ್ಬಂಧಿತ ಗುಟ್ಕಾ ಮೂಟೆಗಳು ಪತ್ತೆಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ರಾತ್ರಿ ಗಸ್ತಿನಲ್ಲಿದ್ದ ಕೂಡ್ಲಿಗಿ ಠಾಣೆ ಪೊಲೀಸರು ಬಿದ್ದಿರುವ ಲಾರಿ ತಪಾಸಣೆ ನಡೆಸುತ್ತಿದ್ದಾಗ 20 ಮೂಟೆಯಷ್ಟು ಗುಟ್ಕಾ ಇರುವುದು ಪತ್ತೆಯಾಗಿದೆ. ಒಟ್ಟು 60 ಮೂಟೆಗಳಿದ್ದು, 40 ಮೂಟೆಗಳು ಪಾನ್ ಮಸಾಲ ಇವೆ. ಉಳಿದ 20 ಮೂಟೆಗಳಷ್ಟು ತಂಬಾಕು ದೊರೆತಿದ್ದರಿಂದ ಪೊಲೀಸರು ಅಚ್ಚರಿಗೊಂಡಿದ್ದಾರೆ. ಪಾನ್ ಮಸಾಲಕ್ಕೆ ಅಧಿಕೃತ ಪರವಾನಗಿ ಇದ್ದರೂ ಸರ್ಕಾರ ನಿಷೇಧಿಸಿದ ಗುಟ್ಕಾ ಮೂಟೆಗಳನ್ನು ಪಾನ್ ಮಸಾಲದೊಂದಿಗೆ ಸೇರಿಸಿ ಸಾಗಿಸುತ್ತಿರುವ ದಂಧೆ ಲಾರಿ ಉರುಳಿಬಿದ್ದ ಪರಿಣಾಮ ಪತ್ತೆಯಾಗಿದೆ. ದಾವಣಗೆರೆಯಿಂದ ಕೂಡ್ಲಿಗಿ ಮಾರ್ಗವಾಗಿ ಕೊಪ್ಪಳಕ್ಕೆ ಲಾರಿ ಹೊರಟಿತ್ತು. ಲಾರಿ ಮತ್ತು ಗುಟ್ಕಾ ವಶಪಡಿಸಿಕೊಂಡು ಚಾಲಕ ಮತ್ತು ಕ್ಲೀನರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಗಜಕೋಶ್, ಸಿಪಿಐ ಕಲ್ಲೇಶಪ್ಪ, ಪಿಎಸ್‌ಐ ಎರ್ರಿಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement