ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತೆರವಾಗದ ಕಂಪ್ಲಿ ಸೇತುವೆ

Lingaraj Badiger
Updated On : 30 Jul 2013, 10:49 am

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರವೂ ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿತ್ತು.
ಸೋಮವಾರ ಹೊಸಪೇಟೆ ತಹಸೀಲ್ದಾರ್ ರಮೇಶ ಕೋನರಡ್ಡಿ ಕಂಪ್ಲಿ- ಗಂಗಾವತಿ ಸೇತುವೆ ಬಳಿ ಭೇಟಿ ನೀಡಿ,  ಸೇತುವೆ ಮೇಲೆ ನೀರು ಹರಿಯುತ್ತಿರುವುದನ್ನು, ಸೇತುವೆ ಮೇಲೆ ಗಿಡ, ಬಳ್ಳಿಗಳು ರಾಶಿಯಾಗಿ ಸುತ್ತುವರಿದಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕೋನರಡ್ಡಿ, ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ದಂಡೆಯ ಗ್ರಾಮಗಳ ಜನತೆಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಾಲೂಕು ಮತ್ತು ಜಿಲ್ಲಾಡಳಿತ ತೆಗೆದುಕೊಂಡಿವೆ. ಕಂದಾಯ, ಪೊಲೀಸ್, ಪುರಸಭೆ, ಆರೋಗ್ಯ, ಜೆಸ್ಕಾಂ, ಹಾಗೂ ಗ್ರಾಮ ಲೆಕ್ಕಿಗರು ಸದಾ ನಿಗಾ ವಹಿಸಿದ್ದಾರೆ. ನದಿ ಪಾತ್ರದ ಜನತೆ ಯಾವುದೇ ರೀತಿಯ ಸಮಸ್ಯೆಗಳಿಗೆ 08394-224208 ಸಹಾಯವಾಣಿಗೆ ತಿಳಿಸಿ, ಸಹಾಯ ಪಡೆಯಬಹುದು. ಕಂಪ್ಲಿ- ಕೋಟೆಯ 15 ಮೀನುಗಾರ ಕುಟುಂಬಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. ಅವರಿಗೆ ಕಂಪ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. ಅವರೆಲ್ಲರೂ ಸ್ಥಳಾಂತರಗೊಂಡ ಅನಂತರ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಕೆ. ಬಾಲಪ್ಪ, ಪಿಎಸ್‌ಐ ಎನ್. ಆನಂದ್, ಪುರಸಭೆ ಮುಖ್ಯಾಧಿಕಾರಿ ಬಿ.ಕೆ. ಬೀರಣಗಿ, ಪುರಸಭೆ ಸದಸ್ಯರಾದ ಡಾ.ವಿ.ಎಲ್. ಬಾಬು ಹಾಗೂ ಎಸ್. ಸುರೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement