ಪರೀಕ್ಷೆಯಲ್ಲಿ ಫೇಲ್: ಆತ್ಮಹತ್ಯೆ
ಬಳ್ಳಾರಿ: ಎಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸ್ವಂತ ಲಿಂಗಣ್ಣ ಕಾಲೋನಿಯಲ್ಲಿ ನಡೆದಿದೆ. ಮೃತಳನ್ನು ಬಳ್ಳಾರಿಯ ಎಂಜಿನಿಯರಿಂಗ್ ಕಾಲೇಜಿನ ಎರಡನೇ ಸೆಮ್ನ ವಿದ್ಯಾರ್ಥಿನಿ ಸುಷ್ಮಾ (22) ಎಂದು ಗುರುತಿಸಲಾಗಿದೆ. 2ನೇ ಸೆಮ್ನಲ್ಲಿ ಫೇಲಾಗಿದ್ದೇನೆ ಎಂದು ಹೇಳಿ, ಮನನೊಂದು ಸೋಮವಾರ ಬೆಳಗ್ಗೆ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.