ಆವಶ್ಯಕತೆಗೆ ತಕ್ಕಂತೆ ಯೂರಿಯಾ ಬಳಸಿ
ಕೊಟ್ಟೂರು: ಮುಂಗಾರು ಹಂಗಾಮಿನ ಈ ದಿನಗಳಲ್ಲಿ ಕೊಟ್ಟೂರು ಭಾಗ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ರೈತರು ಈಗಾಗಲೇ ಬಿತ್ತಿದ ಬೆಳೆಗಳಿಗೆ ಮೇಲು ಗೊಬ್ಬರವಾಗಿ ಯೂರಿಯಾ ಬಳಸುವುದಕ್ಕೆ ಮುಂದಾಗಿದ್ದಾರೆ. ಯೂರಿಯಾ ಬೆಲೆ ಇತರ ರಸಗೊಬ್ಬರಕ್ಕಿಂತ ಕಡಿಮೆ ದಾಸ್ತಾನು ಇದ್ದು, ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಸಲು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯೂರಿಯಾ ಗೊಬ್ಬರ ಹೆಚ್ಚಾಗಿ ಬಳಸಿದಲ್ಲಿ ರಸಹೀರುವ ಕೀಟಗಳ ಬಾಧೆ ಹೆಚ್ಚಾಗುವ ಸಂಭವವಿರುತ್ತದೆ ಎಂದಿದ್ದಾರೆ.
ಎಲ್ಲ ಖಾಸಗಿ ಕಂಪನಿಯ ಯೂರಿಯಾ ರಸಗೊಬ್ಬರಗಳಲ್ಲಿ ಸಾರಜನಕ ಪ್ರಮಾಣ ಶೇ. 46ರಷ್ಟು ಇರುತ್ತದೆ. ರೈತರು ಅವಶ್ಯಕತೆಗೆ ತಕ್ಕಂತೆ ತಮ್ಮ ಬೆಳೆಗಳಿಗೆ ಯೂರಿಯಾ ಗೊಬ್ಬರ ಬಳಸಿ, ಉತ್ತಮ ಇಳುವರಿ ಪಡೆಯಲು ಅನುವು ಮಾಡಿಕೊಳ್ಳಬೇಕು. ಯಾವುದೆ ರಸಗೊಬ್ಬರ ಮಾರಾಟಗಾರರ ಮಳಿಗೆಗೆ ರೈತರು ಹೋಗಿ ತಾವು ತೆಗೆದುಕೊಳ್ಳಬಹುದಾದ ರಸಗೊಬ್ಬರಗಳಿಗೆ ತಾವು ನೀಡಿದ ಹಣಕ್ಕೆ ರಸೀದಿ ಪಡೆಯಲು ಮರೆಯಬಾರದು ಎಂದು ರೈತರಿಗೆ ತಿಳಿಸಿದ್ದಾರೆ.