ಕಳ್ಳನ ಬಂಧನ: ಬೆಳ್ಳಿ ವಶ
ಬಳ್ಳಾರಿ: ಬಳ್ಳಾರಿಯ ಡಿಸಿಐಬಿ ಪೊಲೀಸರು ಕಳ್ಳನೋರ್ವನನ್ನು ಬಂಧಿಸಿ, ಅವನಿಂದ ರು. 38,500 ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಬಂಧಿತನು ಆಂಧ್ರಪ್ರದೇಶದ ರಾಯದುರ್ಗದ ಮೊಳಕಾಲ್ಮೂರ ರಸ್ತೆಯ ಕೋಟೆ ಮಾರೆಮ್ಮ ಗುಡಿಹತ್ತಿರ ವಾಸಿ ಬಿ. ತಿಪ್ಪೇಸ್ವಾಮಿ. ಈತನು ಸೋಮವಾರ ಸಂಜೆ ಬಳ್ಳಾರಿ ಹಳೆ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ಸುತ್ತಾಡುತ್ತಿರುವುದನ್ನು ನೋಡಿದ ಡಿಸಿಐಬಿ ಪೊಲೀಸರು ಬಿ. ತಿಪ್ಪೇಸ್ವಾಮಿಯನ್ನು ಬಂಧಿಸಿ, ಆತನಿಂದ 2 ಬೆಳ್ಳಿ ಲೋಟ, ಒಂದು ಬೆಳ್ಳಿ ತಟ್ಟೆ ಮತ್ತು ಒಂದು ಕೆಜಿ ಬೆಳ್ಳಿಯ ಗಟ್ಟಿ ಸೇರಿದಂತೆ 38,500 ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.