ಸ್ವಾಮಿ ವಿವೇಕಾನಂದರ ಜಯಂತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 30
ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮ ಜರುಗಿತು.
ಗ್ರಾಪಂ ಉಪಾಧ್ಯಕ್ಷ ಸಿ. ಮರೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಚೇಳ್ಳಗುರ್ಕಿಯ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮದುಗೊಂಡ ಮಾತನಾಡಿ, ಪಶ್ಚಿಮ ಬಂಗಾಳ ಸ್ವಾಮಿ ವಿವೇಕಾನಂದರಂತಹ ತತ್ವಜ್ಞಾನಿ ಕೊಟ್ಟಂತಹ ನಾಡು ಎಂದರು. ಚೇಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೆ. ಪ್ರಹ್ಲಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ನಾಗರಾಜ, ನರೇಂದ್ರ, ವಿದ್ಯಾರ್ಥಿಗಳಾದ ಎಂ.ಎಚ್ ಸ್ವಾಮಿ, ಎರಿಸ್ವಾಮಿ, ರವಿ, ಜಾನ್ಸೆನ್, ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯಗುರು ನಾಗಪ್ಪ, ಶಿಕ್ಷಕ ಮಹೇಶ, ವಸತಿ ನಿಲಯದ ನೌಕರ ಡಿ.ನಾರಾಯಣಪ್ಪ, ಆರೋಗ್ಯ ಸಹಾಯಕಿ ಚೆನ್ನಮ್ಮ, ಜಾನಕಿ ಕಾರ್ಖಾನೆ ನೌಕರ ಮಲ್ಲೇಶಿ, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು. ರಾಜ್ಯ ಕ್ರಿಯಾಶೀಲ ವೇದಿಕೆ ಜಿಲ್ಲಾಧ್ಯಕ್ಷ ರವಿ ಚೇಳ್ಳಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಾಥ ಪ್ರಾರ್ಥಿಸಿದರು. ಶೇಖರ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ವಂದಿಸಿದರು.