ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕನ್ನಡ ವಿರೋಧಿ ಚಟುವಟಿಕೆ: ಕ್ರಮಕ್ಕೆ ಒತ್ತಾಯ

Lingaraj Badiger
Updated On : 1 Aug 2013, 11:44 am

ಬಳ್ಳಾರಿ: ನಗರದ ನಾರಾಯಣ ಇ-ಟೆಕ್ನೋ ಶಾಲೆ ಕನ್ನಡ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಡಿಡಿಪಿಐ ನಾರಾಯಣ ಗೌಡರಿಗೆ ಸೋಮವಾರ ಮನವಿ ಸಲ್ಲಿಸಿತು.
ಶಾಲೆಯಲ್ಲಿ ಕನ್ನಡ ಶಿಕ್ಷಕರಿಗೆ ಆದ್ಯತೆ ನೀಡದೆ ಪರಭಾಷಾ ಶಿಕ್ಷಕರಿಗೆ ಆದ್ಯತೆ ನೀಡಲಾಗಿದೆ. ಶಾಲೆಗಳಲ್ಲಿ ಕನ್ನಡದ ಬದಲು ತೆಲುಗು ಭಾಷೆಯಲ್ಲಿ ವ್ಯವಹರಿಸಲಾಗುತ್ತಿದೆ. ತೆಲುಗು ಕಲಿಯುವಂತೆ ಒತ್ತಡ ಹೇರಲಾಗುತ್ತದೆ. ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದ್ದು, ಮಕ್ಕಳಿಗೆ ಸೂಕ್ತ ರಕ್ಷಣೆಯಿಲ್ಲ. ಶಿಕ್ಷಣ ಇಲಾಖೆ ನೀಡಿದ ಅನುಮತಿಯಂತೆ ಶಾಲೆಗಳು ನಡೆಯುತ್ತಿಲ್ಲ. ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆಯದೇ ಪೋಷಕರಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ. ಶಿಕ್ಷಣ ಇಲಾಖೆ ಅನುಮತಿ ನೀಡಿದ ತರಗತಿಗಳನ್ನು ಹೊರತುಪಡಿಸಿ ಹೆಚ್ಚಿನ ತರಗತಿಗಳನ್ನು ನಿಯಮ ಬಾಹಿರವಾಗಿ ನಡೆಸಲಾಗುತ್ತಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ನಾರಾಯಣ ಗೌಡ ತಿಳಿಸಿದರು.
ಈ ಸಂದರ್ಭ ಕರವೇ ಮುಖಂಡರಾದ ಬಿ. ಜಾನಕಿರಾಮ್, ಪಿ.ಎಂ ಈಶ್ವರಪ್ಪ, ಶ್ಯಾಮ್ ಸುಂದರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement