ಕಳವು: ಪ್ರಕರಣ ದಾಖಲು
ಬಳ್ಳಾರಿ: ನಗರದ ಬ್ರೂಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ ಕಳುವಾಗಿದ್ದು, ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅಶೋಕ್ ಹಿರಾವತ್ ಎಂಬುವವರು ಮಗನೊಂದಿಗೆ ಮಂಗಳವಾರ ರಾತ್ರಿ 10.30ರ ಸುಮಾರಿಗೆ ತಮ್ಮ ಟಿವಿಎಸ್ ಸ್ಟಾರ್ಸ್ಪೋರ್ಟ್ಸ್ ದ್ವಿಚಕ್ರ ವಾಹನವನ್ನು ಕಾರ್ಯನಿಮಿತ್ತ ಪಾತಕಂದಕಂ ಬಾಯ್ಸ್ ಹಾಸ್ಟೆಲ್ ಬಳಿ ವಾಹನ ನಿಲ್ಲಿಸಿ, ಸ್ವಲ್ಪ ಸಮಯ ಬಿಟ್ಟು ನೋಡಿದಾಗ ಸ್ಥಳದಲ್ಲಿ ವಾಹನವಿರಲಿಲ್ಲ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಗೆಯೇ, ನಗರದ ರೇಲ್ವೆ ನಿಲ್ದಾಣದ ಸಮೀಪದ ಜಲ ಸಂಪನ್ಮೂಲ ಇಲಾಖೆ ಪ್ರಯೋಗ ಶಾಲೆಯ ಬೀಗ ಮುರಿದ ಕಳ್ಳರು ರು. 21,750 ಮೌಲ್ಯದ ವೈಜ್ಞಾನಿಕ ಉಪಕರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ದೂರು ಬಂದಿದ್ದು, ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
--