ಮೂಢನಂಬಿಕೆ, ಅನಕ್ಷರತೆಯಿಂದ ಜನಸಂಖ್ಯೆ ಹೆಚ್ಚಳ
ಹೂವಿನಹಡಗಲಿ: ಅನಕ್ಷರತೆ, ಮೂಢ ನಂಬಿಕೆಗಳು ಜನಸಂಖ್ಯಾ ಸ್ಫೋಟಕ್ಕೆ ಪ್ರಮುಖ ಕಾರಣ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಕಾರಿ ಪಿ. ಲಿಂಗನಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಮಹಾಜನದಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಳವಾಗಲು ಬೇಗ ಮದುವೆ, ಬೇಗ ತಾಯ್ತನದ ಬಯಕೆಯ ಜತೆಗೆ ದೇಶದ ಹವಾಗುಣ, ಜನನದ ನಡುವಿನ ಅಂತರ ಕಾಪಾಡಿಕೊಳ್ಳದೇ ಇರುವುದು ಕಾರಣವಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಏರುಗತಿ ಕಂಡಿರುವುದರಿಂದ ಎಲ್ಲ ರಾಷ್ಟ್ರಗಳು ವಿಶ್ವ ಜನಸಂಖ್ಯೆ ದಿನಾಚರಣೆ ನಡೆಸುತ್ತಾ ಬಂದಿದೆ. ರಾಷ್ಟ್ರೀಯ ಕಾರ್ಯಕ್ರಮಗಳ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಿಸಲಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ. ಜನಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಹೇಳಿದರು.
ಕಿರಿಯ ಆರೋಗ್ಯ ಸಹಾಯಕಿ ಬಸಮ್ಮ ಮಾತನಾಡಿ, ಒಂದು ಮಗುವಿನಿಂದ ಇನ್ನೊಂದು ಮಗುವಿಗೆ 3ರಿಂದ 5 ವರ್ಷದ ಅಂತರ ಕಾಪಾಡಿಕೊಳ್ಳಬೇಕು. ಇದರಿಂದ ತಾಯಿ ಮತ್ತು ಮಗುವಿನಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಗ್ರಾಪಂ ಸದಸ್ಯೆ ಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವೈದ್ಯಾಕಾರಿ ಡಾ.ಜಿ. ಕುಮಾರಸ್ವಾಮಿ, ಆಶಾ ಕಾರ್ಯಕರ್ತೆಯರಾದ ಎಚ್. ವೀರಮ್ಮ, ಅನ್ನಪೂರ್ಣಾ ಇತರರು ಭಾಗವಹಿಸಿದ್ದರು. ರೂಪ ಪ್ರಾರ್ಥಿಸಿದರು. ಜಿ. ರಾಜೇಂದ್ರ ಸ್ವಾಗತಿಸಿದರು. ಡಿ. ರೇಣುಕಾ ನಿರೂಪಿಸಿದರು. ಕೆ. ಮಮತಾ ವಂದಿಸಿದರು.