ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಉತ್ತಮ ವ್ಯಕ್ತಿಗಳಾಗಿ ಬದುಕಿ

Mainashree
Updated On : 3 Jun 2013, 10:53 am

ಹೊಸಪೇಟೆ: ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗಳಾಗಿ ಬದುಕನ್ನು ಸಾಗಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕಾಗಿದೆ ಎಂದು ಕೂಡಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಡಾ. ವಿದ್ಯಾಭಿನವ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಮೂಕಾಂಬಿಕಾದೇವಿ ದೇವಸ್ಥಾನದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಜಾಲನೆ ನೀಡಿ ಅವರು ಮಾತನಾಡಿ,  ಮುನುಷ್ಯ ಅನೇಕ ವಿಧವಾದ ಜೀವನದ ಜಂಜಾಟದಲ್ಲಿ ತೊಡಗಿಕೊಂಡು ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಹೀಗಾಗಿ ನಿತ್ಯವೂ ಸ್ವಲ್ಪ ಸಮಯವನ್ನು ಮನಃಶಾಂತಿಗಾಗಿ ದೇವರ ಧ್ಯಾನದಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ದೇವತಾರಾಧನೆ, ನಂದಿ ವೀರಭದ್ರ ನಾಗಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರತಿಷ್ಠಾಂಗ ಹೋಮ, ಶ್ರೀಗಳ ಸಾಮೂಹಿಕ ಪಾದಪೂಜೆ, ರಾಕ್ಷೆಘ ಹೋಮ, ಬಲಿ ಪೂರ್ಣಾಹೂತಿ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ಶ್ರೀಗಳ ಅಣತಿಯಂತೆ ಭಕ್ತವೃಂದ ನೆರವೇರಿಸಿದರು. ಎಸ್.ಪಿ. ಸುಂದರೇಶ ಭಟ್, ಗೊಗ್ಗ ರಾಜಣ್ಣ, ಕೆ. ದಿವಾಕರ ಸೇರಿದಂತೆ ಸಹಸ್ರಾರು ಭಕ್ತರು ಸಾಂಪ್ರದಾಯಿಕ ಮೇಳ, ಬಾಣ ಬಿರುಸುಗಳೊಂದಿಗೆ ಶ್ರೀಗಳನ್ನು ನಗರಕ್ಕೆ ಬರಮಾಡಿಕೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement