ಪ್ರತಿಭಾವಂತೆ ಓದಿಗೆ ಬೇಕು ನೆರವು
ಕ.ಪ್ರ.ವಾರ್ತೆ , ಹಗರಿಬೊಮ್ಮನಹಳ್ಳಿ , ಜೂ. 3
ಮನೆಯಲ್ಲಿ ಬಡತನವಿದ್ದರೂ ವೈದ್ಯೆಯಾಗುವ ಕನಸು ಕಂಡು, ಉತ್ತಮವಾಗಿ ಅಭ್ಯಾಸ ಮಾಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 538 ಅಂಕಗಳಿಸಿರುವ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ವಿದ್ಯಾರ್ಥಿನಿ ಕೆ. ಗಂಗಮ್ಮ ಸಿಇಟಿ ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 1303ನೇ ರ್ಯಾಂಕ್ ಗಳಿಸಿದ್ದಾಳೆ.
ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ ಈ ವಿದ್ಯಾರ್ಥಿನಿಯ ಆರ್ಥಿಕ ಪರಿಸ್ಥಿತಿ ಕುರಿತು 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು. ಮನೆಯಲ್ಲಿನ ಬಡತನದ ಕುರಿತು ವರದಿ ಪ್ರಕಟಿಸಿದ್ದರಿಂದ ಪಟ್ಟಣದ ಎಸ್ಬಿಐ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಾಲ ಸೌಲಭ್ಯ ನೀಡುವುದಾಗಿ ವಾಗ್ದಾನ ಮಾಡಿದೆ.
ಆದರೂ ಈ ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ. ಸಹಾಯ ನೀಡುವವರು ಕೆ. ಗಂಗಮ್ಮ, ಬ್ಯಾಂಕ್ ಖಾತೆ ಸಂಖ್ಯೆ- 64083564293, ಸ್ಟೇಟ್ ಬ್ಯಾಕ್ ಆಫ್ ಮೈಸೂರು (ಎಸ್ಬಿಎಂ) ಡ್ಯಾಂ ರೋಡ್ ಶಾಖೆ, ಹೊಸಪೇಟೆ, ಬಳ್ಳಾರಿ ಜಿಲ್ಲೆ ಇಲ್ಲಿಗೆ ಹಣ ಜಮಾ ಮಾಡಬಹುದು. ಹೆಚ್ಚಿನ ಸಂಪರ್ಕಕ್ಕಾಗಿ ಮೊ.ಸಂ-9481388899 ಸಂಪರ್ಕಿಸಬಹುದು.