ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೆಳೆನಷ್ಟ ಪರಿಹಾರ ವಿತರಣೆಗೆ ಒತ್ತಾಯ

Mainashree
Updated On : 4 Jun 2013, 11:06 am

ಹಗರಿಬೊಮ್ಮನಹಳ್ಳಿ: ಬರಗಾಲದಿಂದಾಗಿ ಬೆಳೆನಷ್ಟ ಹೊಂದಿದ ರೈತರಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬೆಳೆ ಪರಿಹಾರದ ಚೆಕ್‌ಗಳನ್ನು ತಕ್ಷಣ ವಿತರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮು ಉತ್ತಮ ಆರಂಭ ಪಡೆದಿದೆ. ತಾಲೂಕಿನೆಲ್ಲಡೆ ಉತ್ತಮ ಮಳೆಯಾಗಿದೆ. ಈಗಾಗಲೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇಂತಹ ಸಮಯದಲ್ಲಿ ಸರ್ಕಾರ ನೀಡಿದ ಪರಿಹಾರದ ಚೆಕ್‌ಗಳನ್ನು ವಿತರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲ್ಲೆಯಲ್ಲಿ ತಕ್ಷಣ ಪರಿಹಾರ ಚೆಕ್‌ಗಳನ್ನು ವಿತರಿಸುವಂತೆ ತಹಸೀಲ್ದಾರ್‌ಗೆ ಆಗ್ರಹಿಸಲಾಗಿದೆ ಎಂದರು.
ಸತತ ಎರಡು ವರ್ಷಗಳಿಂದ ಭೀಕರ ಬರದಿಂದಾಗಿ ಬೆಳೆನಷ್ಟ ಅನುಭವಿಸಿದ ರೈತಾಪಿ ವರ್ಗ ನಿತ್ರಾಣಗೊಂಡಿದೆ. ಬೆಳೆನಷ್ಟಕ್ಕೆ ಗುರಿಯಾಗಿರುವ ರೈತರಿಗೆ ಸರ್ಕಾರದಿಂದ ಬಂದಿರುವ ಪರಿಹಾರವನ್ನು ವಿತರಿಸುವುದು ತಾಲೂಕಾಡಳಿತದ ಕೆಲಸ. ಇದನ್ನು ನೆನಪಿಸಲು ತಾವು ನಿಯೋಗದ ಮೂಲಕ ತಹಸೀಲ್ದಾರ್‌ಗೆ ಮನವಿಪತ್ರ ನೀಡಿದ್ದೇವೆ ಎಂದು ಹೇಳಿದರು.
ನಿಯೋಗದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಗ್ಡಾಳ ರಾಮಣ್ಣ, ಬುಡ್ಡಿ ಬಸವರಾಜ, ಭೋವಿ ಸಣ್ಣಹುಲುಗಪ್ಪ, ಪತ್ರೇಶ್ ಹಿರೇಮಠ, ಯುವ ಕಾಂಗ್ರೆಸ್ ಉಪಾಧ್ಯಕ್ಷ ತಟ್ಟಿ ರಾಘವೇಂದ್ರ, ಉಪ್ಪಾರಗಟ್ಟಿ ಕೊಟ್ರೇಶ್, ಕುರುಬರ ವೆಂಕಟೇಶ್, ಕಾಡಪ್ಪ, ಎಸ್. ವಿಶ್ವನಾಥ, ಎಚ್. ಮಲ್ಲೇಶಪ್ಪ, ಕೆ. ಹನುಮಂತಪ್ಪ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement