ಎಮ್ಮೆಗೆ ಡಿಕ್ಕಿ: ಬೈಕ್ ಸವಾರ ಸಾವು
ಬಳ್ಳಾರಿ: ದ್ವಿಚಕ್ರ ವಾಹನ ಅಡ್ಡ ಬಂದ ಎಮ್ಮೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಹೊಸಮೋಕಾ ಸಮಿಪದ ಕೆಇಬಿ ಹತ್ತಿರ ನಡೆದಿದೆ. ಮೃತನನ್ನು ಸಿರುಗುಪ್ಪದ ಕಿಶೋರ್ಕುಮಾರ್ (25) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 8.30ರ ಸುಮಾರಿಗೆ ಬಳ್ಳಾರಿಯಿಂದ ಆದೋನಿ ಕಡೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಹೊಸ ಮೋಕಾ ಸಮೀಪದ ಕೆಇಬಿ ಹತ್ತಿರ ಎಮ್ಮೆ ಅಡ್ಡ ಬಂತು. ಎಮ್ಮೆ ಕೋಡು ತಾಕಿ ಕೆಳಗೆ ಬಿದ್ದಿದ್ದರಿಂದ ಕಿಶೋರ್ಕುಮಾರ್ ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.