ಶಿಕ್ಷಣದಿಂದ ಬದುಕಿಗೆ ಅರ್ಥ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಜೂ. 11
ಬದುಕಿಗೆ ಅರ್ಥ ಕಲ್ಪಿಸಿಕೊಡುವುದು ಶಿಕ್ಷಣ. ಶಿಕ್ಷಕರ ಸಾರ್ಥಕತೆ ಮಕ್ಕಳಿಗೆ ಕಲಿಸಿಕೊಡುವುದರಲ್ಲಿ ಅಡಗಿದೆ. ಮಕ್ಕಳ ಕಲಿಕೆಗೆ ಒತ್ತಡ ಹಾಕದೆ ಸೃಜನಶೀಲರನ್ನಾಗಿ ಮತ್ತು ಸಾಧಕರನ್ನಾಗಿ ಮಾಡಬೇಕು ಎಂದು ಗುಲ್ಬರ್ಗಾ ಸಿಟಿಇ ಜಂಟಿ ನಿರ್ದೇಶಕ ಡಾ.ಎಚ್. ಬಾಲರಾಜ್ ತಿಳಿಸಿದರು.
ಪಟ್ಟಣದ ಗುರು ಮಠದಲ್ಲಿ ಬಿಇಓ ಕಚೇರಿಯ ಸಾರ್ವಜನಿಕ ಇಲಾಖೆ ಹೊಸಪೇಟೆ ಮತ್ತು ವಿದ್ಯಾಸಾಗರ ವಸತಿ ಪ್ರೌಢಶಾಲೆ ಕಂಪ್ಲಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ವಿದ್ಯಾ ಗೌರವ ಸ್ವರ್ಣ ಪದಕ ಮತ್ತು ರಾಷ್ಟ್ರೀಯ ವಿದ್ಯಾ ಸರಸ್ವತಿ ಪುರಸ್ಕಾರ ಪುರಸ್ಕೃತ, ಗುಲ್ಬರ್ಗಾ ಸಿಟಿಇ ಜಂಟಿ ನಿರ್ದೇಶಕ ಡಾ.ಎಚ್. ಬಾಲರಾಜ್ ಅವರಿಗೆ ಸನ್ಮಾನ ಹಾಗೂ ಶೈಕ್ಷಣಿಕ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಲಿಪಿಕ ಮತ್ತು ಬೋಧಕೇತರ ನೌಕರರ ಸಂಘ ಗುಲಬರ್ಗಾ ವಿಭಾಗೀಯ ಉಪಾಧ್ಯಕ್ಷ ಜಿ. ಗೋಣಿಬಸಪ್ಪ ಮಾತನಾಡಿ, ಕುಗ್ರಾಮದಲ್ಲಿ ಜನಿಸಿ, ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಉನ್ನತ ಪದವಿ ಮತ್ತು ಪುರಸ್ಕಾರಗಳನ್ನು ಪಡೆದ ಡಾ.ಎಚ್. ಬಾಲರಾಜ್ ಅವರ ಸಾಧನೆ ಅನನ್ಯವಾದುದು ಎಂದರು.
ಹೊಸಪೇಟೆ ಬಿಇಓ ಪಿ. ಸುನಂದಾ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಶೇಖರ ಹೊಸಪೇಟೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಮಾರ್ಗದಪ್ಪ, ವಿದ್ಯಾಸಾಗರ ವಸತಿ ಶಾಲೆ ಪ್ರಾಚಾರ್ಯ ಪಿ. ನಾಗೇಶ್ವರರಾವು ಮತ್ತು ಖಜಾಂಚಿ ಟಿ. ಕೊಟ್ರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಆರ್ಪಿಗಳಾದ ಮಹ್ಮದ್ ಇಸಾಕ್, ಯು. ರಾಜಶೇಖರ, ಶಂಕರ್ ನಾಯಕ್, ಎಸ್. ಚಂದ್ರಶೇಖರ, ಮುಖ್ಯಗುರು ಟಿ. ನಾರಾಯಣ ರೆಡ್ಡಿ, ಶಿಕ್ಷಕ ಎಂ.ಎಸ್. ಶರಣಬಸವ ಹಾಗೂ ಕಂಪ್ಲಿ ಹೋಬಳಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯಗುರುಗಳು, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
ಜೆ. ಚಿನ್ಮಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ. ವೆಂಕಟೇಶ ಸ್ವಾಗತಿಸಿದರು. ಸೈಯದ್ ಹುಸೇನ್, ಸುಮಿತ್ರ ನಿರೂಪಿಸಿದರು. ಜೆ.ಪಿ. ಶಾಸ್ತ್ರಿ ತಬಲ ಮತ್ತು ಸರಸ್ವತಿ ಶಾಸ್ತ್ರಿ ಕ್ಯಾಶಿಯೋ ನುಡಿಸಿದರು.