ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಒಂದೇ ಕುಟುಂಬದ ನಾಲ್ಕು ಮಕ್ಕಳಿಗೆ ಡೆಂಘೀ

Mainashree
Updated On : 15 Jun 2013, 10:44 am

ಕನ್ನಡಪ್ರಭ ವಾರ್ತೆ  ಹಗರಿಬೊಮ್ಮನಹಳ್ಳಿ  ಜೂ.15
ತಾಲೂಕಿನ ಕಾತ್ಯಾಯನಿಮರಡಿ ಗ್ರಾಮದ ನಾಲ್ಕು ಮಕ್ಕಳಲ್ಲಿ ಡೆಂಘೀ ಸೊಂಕು ಪತ್ತೆಯಾಗಿದೆ. ಮೂರು ದಿನಗಳಲ್ಲಿಯೇ ನಾಲ್ಕು ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಮಕ್ಕಳಾದ ಶಾಂತಲಾ, ವಿನಾಯಕ, ವಿನಾಯಕಸ್ವಾಮಿ, ಚಂದನಾರಲ್ಲಿ ರೋಗದ ಸೊಂಕು ಪತ್ತೆಯಾಗಿದ್ದು, ಈ ಪೈಕಿ ಎಂಟು ತಿಂಗಳ ಕೂಸು ಚಂದನಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯಲಾಗಿದೆ. ಉಳಿದ ಮಕ್ಕಳನ್ನು ಪಟ್ಟಣದ ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾತ್ಯಾಯನಿಮರಡಿಯಲ್ಲಿ ಡೆಂಘೀ ಹರಡುತ್ತಿರುವ ಬಗ್ಗೆ ವೈದ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement