ಐರನ್ ಪ್ಲೇಟ್ಸ್ ಬಿದ್ದು ಕಾರ್ಮಿಕರಿಬ್ಬರ ಸಾವು
ಸಂಡೂರು: ಸಂಡೂರು ತಾಲೂಕಿನ ಚಿಂಕತಾಪುರ ಸಮೀಪದ ಪದ್ಮಾವತಿ ಸ್ಪಾಂಜ್ ಐರನ್ ಪೈಲೆಟ್ ಪ್ಲಾಂಟ್ನಲ್ಲಿ ಸ್ಪಾಂಜ್ ಐರನ್ ಪ್ಲೇಟ್ಸ್ಗಳು ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ಉತ್ತರಪ್ರದೇಶ ಮೂಲದ ಸುಬ್ಬನಾರಾಯಣ ಶರ್ಮ(27), ಆಂಧ್ರಪ್ರದೇಶದ ಹರಿ(25) ಎಂದು ಗುರುತಿಸಲಾಗಿದೆ. ಇನ್ನು ಆಂಧ್ರಪ್ರದೇಶದ ಬಾಬು ಮತ್ತು ಪುಲ್ಲರಾವ್ ಗಾಯಗೊಂಡು, ವಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪಾಂಜ್ ಐರನ್ ಪ್ಲೇಟ್ಸ್ಗಳು ಕೆಲಸ ಮಾಡುತ್ತಿದ ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಸುಬ್ಬನಾರಾಯಣ ಶರ್ಮ ಸ್ಥಳದಲ್ಲೇ ಮೃತಪಟ್ಟರೆ, ಹರಿ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.