ಗಂಗಾದೇವಿ ಜಯಂತ್ಯುತ್ಸವ
ಕಂಪ್ಲಿ: ಶ್ರೀ ಗಂಗಾದೇವಿ ಜಯಂತ್ಯುತ್ಸವದ ಅಂಗವಾಗಿ, ಗಂಗಾಮತ ಸಮಾಜ ಬಾಂಧವರು ಕಂಪ್ಲಿ ಸಮೀಪದ ನಂ.10 ಮುದ್ದಾಪುರ ಗ್ರಾಮದಲ್ಲಿ ಗಂಗಾದೇವಿ ವಿಶೇಷ ಪೂಜಾ ಮಹೋತ್ಸವ ಹಾಗೂ ಭಾವಚಿತ್ರ ಮೆರವಣಿಗೆಯನ್ನು ಇತ್ತೀಚೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರದ್ಧೆ ಭಕ್ತಿಯಿಂದ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಮತ ಸಮಾಜದ ಯುವ ಮುಖಂಡ, ಗ್ರಾ.ಪಂ. ಮಾಜಿ ಸದಸ್ಯ ಟಿ.ಶಂಕರ, ಗಂಗಾಮತ ಸಮಾಜ ಬಾಂಧವರು ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಬೇಕು. ಜೊತೆಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಗಂಗಾಮತ ಸಮಾಜ ಬಾಂಧವರೆಲ್ಲರೂ ಸಂಘಟಿತರಾಗಬೇಕು ಎಂದರು. ಕಂಪ್ಲಿ ಫಿರ್ಕಾ ಗಂಗಾಮತ ಸಮಾಜ ಅಧ್ಯಕ್ಷ ಕಟ್ಟೆ ವೆಂಕಟೇಶ, ಯುವ ಮುಖಂಡರಾದ ಭಂಡಾರಿ ನರಸಪ್ಪ, ವೈ.ಉಮೇಶ, ಸೂಗೂರು ಈರಣ್ಣ, ಕೆ.ಶಂಕರ, ಎ.ತಾಯಣ್ಣ, ಕೆ.ರಾಮಮೂರ್ತಿ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.