ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯುತ್ ವ್ಯತ್ಯಯ

Lingaraj Badiger
Updated On : 26 Jun 2013, 10:57 am

ಬಳ್ಳಾರಿ:  ಕುರುಗೋಡು ಪಟ್ಟಣ, ಕುರುಗೋಡು ಹಾಗೂ ಎಮ್ಮಿಗನೂರು ವಿದ್ಯುತ್ ಉಪಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ ಹಳ್ಳಿಗಳಿಗೆ ಜೂ. 28ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಜೆಸ್ಕಾಂನ ಕಾರ್ಯನಿರ್ವಾಹಕ  ಅಭಿಯಂತರಾದ ಗೌಡ ಗಣೇಶ ತಿಳಿಸಿದ್ದಾರೆ. ಕುರುಗೋಡು ಉಪಕೇಂದ್ರಕ್ಕೆ ಬರುವ 110 ಕೆ.ವಿ. ಪ್ರಸರಣ ಮಾರ್ಗದಲ್ಲಿ ಒಂದು ಗೋಪುರವನ್ನು ಸರಿಪಡಿಸುವ ಕಾಮಗಾರಿ ಕೈಗೊಳ್ಳುವ ನಿಮಿತ್ತ ವಿದ್ಯುತ್ ಕಡಿತವುಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು  ಅವರು ಮನವಿ ಮಾಡಿದ್ದಾರೆ.
83 ಮಿ.ಮೀ. ಮಳೆ
ಬಳ್ಳಾರಿ:  ಜಿಲ್ಲೆಯಲ್ಲಿ ಜೂ. 25ರಂದು ಕೂಡ್ಲಿಗಿ ತಾಲೂಕಿನಲ್ಲಿ 2 ಮಿ.ಮೀ. ಹಾಗೂ ಸಂಡೂರು ತಾಲೂಕಿನಲ್ಲಿ 6.8 ಮಿ.ಮೀ. ಸೇರಿದಂತೆ ಒಟ್ಟು 8.8 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜೂನ್ ತಿಂಗಳ ಈವರೆಗೆ ಜಿಲ್ಲೆಯಲ್ಲಿ ಒಟ್ಟು 585.7 ಮಿ.ಮೀ. ಮಳೆಯಾಗಿದ್ದು, ಸರಾಸರಿ 83.7 ಮಿ.ಮೀ. ಮಳೆಯಾದಂತಾಗಿದೆ.

ಸಂಘಗಳು ಮಧ್ಯವರ್ತಿಗಳ ಹಾವಳಿ ತಪ್ಪಿಸಲಿ
ಹೊಸಪೇಟೆ: ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಮುಟ್ಟದಂತೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಂಘ, ಸಂಸ್ಥೆಗಳು ಮಧ್ಯವರ್ತಿಗಳ ಹಾವಳಿ ತಡೆಗಟ್ಟುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಅರ್ಹ ಫಲಾನುಭವಿಗಳವಿಗೆ ನ್ಯಾಯ ದೊರೆಕಿಸಿಕೊಡಲು ಮುಂದಾಗಬೇಕು ಎಂದು ಶಾಸಕ ಬಿ.ಎಸ್. ಆನಂದ್ ಸಿಂಗ್ ಹೇಳಿದರು. ನಗರದ ರೋಟರಿ ಸಭಾಂಗಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ವಿಜಯನಗರ ರಕ್ಷಣಾ ವೇದಿಕೆ ಸಂಘಟನೆಯನ್ನು  ಉದ್ಘಾಟಿಸಿ ಅವರು ಮಾತನಾಡಿ, ಸಂಘ, ಸಂಸ್ಥೆಗಳು ಜನರಿಗೆ ನೆರವು ಆಗುವ ರೀತಿಯಲ್ಲಿ ಹೋರಾಟಗಳನ್ನು ಹಮ್ಮಿಕೊಂಡಾಗ ಮಾತ್ರ ವಿಶ್ವಾಸರ್ಹತೆ ಉಳಿಸಿಕೊಳ್ಳುತ್ತವೆ. ಸ್ವಾರ್ಥಕ್ಕಾಗಿ ಸಂಘ, ಸಂಸ್ಥೆಗಳನ್ನು ಬಳಸಿಕೊಂಡರೆ ಅಂತಹ ಸಂಘಗಳು ಬಹುಬೇಗ ಜನರ ವಿಶ್ವಾಸ ಕಳೆದುಕೊಳ್ಳುತ್ತವೆ. ಈ ಕುರಿತು ಸಂಘ, ಸಂಸ್ಥೆಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ವಿಜಯನಗರ ರಕ್ಷಣಾ ವೇದಿಕೆ ಅಧ್ಯಕ್ಷ ಕೆ. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಗಾಂಧಿವಾದಿ ಕೆ. ನಾರಾಯಣ ಭಟ್ ವೇದಿಕೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು. ವಿಎನ್‌ಸಿ ಪ್ರಾಧ್ಯಾಪಕ ಡಾ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಕವಿತಾ ಈಶ್ವರಸಿಂಗ್, ವಿನೋದ್ ಸಿಂಗ್, ರತನ್ ಚಂದ್, ವೈ. ಯಮುನೇಶ್, ಕಿಚಡಿ ಶ್ರೀನಿವಾಸ, ಜಂಬಾನಹಳ್ಳಿ ರಾಮಣ್ಣ, ಕಸಿಟ್ಟಿ ಉಮಾಪತಿ, ಕೆ. ರತ್ನಾಕರ ರಾವ್, ಪೂಜಾರಿ ವೆಂಕೋಬ ನಾಯಕ, ಗಿಂಜಿ ಮಂಜುನಾಥ, ರೂಪೇಶ್ ಕುಮಾರ್, ಸುಭಾಷ ನಾಯಕ್, ಯಲ್ಲಣ್ಣ ನಾಯಕ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement