ಇಂದು ಶಾಸಕ, ಸಚಿವರಿಗೆ ಬಂಜಾರ ಸಂಘದಿಂದ ಸನ್ಮಾನ
ಬಳ್ಳಾರಿ: ರಾಜ್ಯ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಮತ್ತು ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾ ನಾಯ್ಕ್ರಿಗೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜೂ. 30ರ ಬೆಳಗ್ಗೆ 11ಕ್ಕೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲಾ ಬಂಜಾರ (ಲಂಬಾಣಿ) ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10ಕ್ಕೆ ನಗರದ ಸುಧಾಕ್ರಾಸ್ ಬಳಿಯಿಂದ ಬೈಕ್ ರ್ಯಾಲಿ ಮುಖಾಂತರ ಸಚಿವರು ಹಾಗೂ ಶಾಸಕರನ್ನು ಕರೆ ತರಲಾಗುವುದು. ಜಿಲ್ಲೆಯ ಎಲ್ಲ ಬಂಜಾರ (ಲಂಬಾಣಿ) ಸಮುದಾಯದವರು ಭಾಗವಹಿಸುವಂತೆ ಸಂಘದ ಅಧ್ಯಕ್ಷ ಆರ್. ಚಂದ್ರಾ ನಾಯ್ಕ್ ತಿಳಿಸಿದ್ದಾರೆ.