ಜೈ ಕನ್ನಡ ವೇದಿಕೆ ಸದಸ್ಯರ ಆಯ್ಕೆ
ಬಳ್ಳಾರಿ: ಜೈ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಘಟಕಕ್ಕೆ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸಂಸ್ಥಾಪಕ ಅಧ್ಯಕ್ಷ ಜಾನಕಿರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ಈಶ್ವರಪ್ಪ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಕೆ. ಶ್ಯಾಮ್ ಸುಂದರ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮಣ್ ನಾಯಕ್, ಸಹ ಸಂಘಟನಾ ಕಾರ್ಯದರ್ಶಿ ಸುರೇಶ ನಾಯಕ್, ಖಜಾಂಜಿ ಡಿ. ರವಿಶಂಕರ್, ಸಹ ಖಜಾಂಚಿ ಮೀನು ಚೈತನ್ಯ ರೆಡ್ಡಿ, ಸಮಿತಿ ಸದಸ್ಯ ಕೆ. ಆನಂದ, ಎಚ್. ಪೆಂಚಾಲಯ್ಯ, ಜಿ.ಎಂ. ಪ್ರದೀಪ್, ಕೆ. ಅನಿಲ್ ಕುಮಾರ್, ಸಿ. ನಾಗರಾಜ, ಬಿ ರಾಮುಡು, ಪ್ರಹ್ಲಾದ್, ತಮ್ಮಣ್ಣ, ತಿಪ್ಪೇಸ್ವಾಮಿ, ಮಹಾಂತೇಶ ಗೌಡ, ಪಿ. ಅನಂತರಾಜ್, ಬಿ. ರಾಮು ಆಯ್ಕೆ ಮಾಡಲಾಗಿದೆ.