ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನೋಟ್ ಪುಸ್ತಕ ಉಚಿತ ವಿತರಣೆ

Rashmi Kasaragodu
Updated On : 30 Jun 2013, 1:09 am

ಕಂಪ್ಲಿ: ಕಂಪ್ಲಿಯ ಎಂ.ಡಿ. ಕ್ಯಾಂಪ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಾ ವಿತರಣಾ ಕಾರ್ಯಕ್ರಮ ಜರುಗಿತು.
ಎಮ್ಮಿಗನೂರು ಶ್ರೀಗುರು ಕೊಟ್ಟೂರೇಶ್ವರ ಗ್ರಾಮೀಣ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಚಾರ್ಯ ಮತ್ತು ಕಂಪ್ಲಿ ಶ್ರೀಕೊಟ್ಟೂರೇಶ್ವರ ಝೆರಾಕ್ಸ್ ಅಂಗಡಿ ಮಾಲೀಕ ಎನ್.ಎಂ. ಪತ್ರಯ್ಯಸ್ವಾಮಿ  ಸುಮಾರು 150 ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಇನ್ಫೋಸಿಸ್ ಕಂಪನಿಯಿಂದ ಬಂದಿರುವ 4 ಕಂಪ್ಯೂಟರ್ಗಳಿಗೆ ಟೇಬಲ್ ಮತ್ತು ಯುಪಿಎಸ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಗುರು ಎಸ್. ಸಿದ್ದೇಶ, ನಮ್ಮ ಶಾಲೆಗೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಕಂಪ್ಲಿ ಶಾಖೆಯವರು 5 ಸೀಲಿಂಗ್ ಫ್ಯಾನ್, ಕಣಿವಿ ತಿಮ್ಮಲಾಪುರ ಗ್ರಾಮದ ಗಂಗಾಧರಗೌಡ ರು. 2,000 ಮೊತ್ತದ ಲೇಖನಿ ಸಾಮಗ್ರಿ ದೇಣಿಗೆಯಾಗಿ ನೀಡಿದ್ದಾರೆ. ಇವರೆಲ್ಲರಿಗೆ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು ಅಭಿನಂದನೆ ಹೇಳಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ಸಹಾಯ ಮಾಡುವ ಆಸಕ್ತಿಯುಳ್ಳವರು 9916753115ಗೆ ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement