ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಕ್ಕಳಿಗೆ ಪೆಂಟವಲೆಂಟ್ ಲಸಿಕೆ ಹಾಕಿಸಿ

Mainashree
Updated On : 3 Mar 2013, 11:38 am

ಹೂವಿನಹಡಗಲಿ: ಮಕ್ಕಳನ್ನು ಐದು ಮಾರಕ ರೋಗಗಳಿಂದ ಮುಕ್ತವಾಗಿಡಲು ಪೆಂಟವಲೆಂಟ್ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪಿ. ಬದ್ಯಾನಾಯ್ಕ ತಿಳಿಸಿದರು. ಮಕ್ಕಳಲ್ಲಿ ಕಂಡು ಬರುವ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ಕಾಮಾಲೆ ಹಾಗೂ ಜ್ವರದಲ್ಲಿ ರಕ್ತಸ್ರಾವದಂತಹ ಮಾರಕ ರೋಗಗಳಿಗೆ ಡಿಪಿಟಿ, ಹೆಪಟೈಟಸ್-ಬಿ ಲಸಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುತಿತ್ತು. ಆದರೆ ಈಗ ಹೊಸದಾಗಿ ಕಂಡುಹಿಡಿಯಲಾಗಿರುವ ಪೆಂಟವಲೆಂಟ್ ಚುಚ್ಚುಮದ್ದನ್ನು ಹುಟ್ಟಿದ 45 ದಿನ, 75 ದಿನ ಹಾಗೂ 105 ದಿನಗಳಲ್ಲಿ 3 ಡೋಸ್‌ಗಳಂತೆ ನೀಡಿದರೆ ಐದು ಮಾರಕ ರೋಗಗಳನ್ನು ತಡೆಯಬಹುದಾಗಿದೆ ಎಂದರು.
ಮಗುವೊಂದಕ್ಕೆ ಪೆಂಟವಲೆಂಟ್ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಬಿ. ಶಿವಕುಮಾರ್ ಮಾತನಾಡಿ, ಖಾಸಗಿಯಾಗಿ ಅತ್ಯಂತ ದುಬಾರಿಯಾಗಿರುವ ಲಸಿಕೆಗಳು ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಸಿ.ಸಿ. ಪ್ರೇಮಾ, ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಈ. ಮಹೇಶ್‌ಕುಮಾರ್, ಆರೋಗ್ಯ ನಿರೀಕ್ಷಕ ವಿ. ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement