ಬಳ್ಳಾರಿ

ಕಂಪ್ಲಿಯಲ್ಲಿ ಶೇ. 76.72 ಮತದಾನ

ಕಂಪ್ಲಿ:  ಕಂಪ್ಲಿ ಪುರಸಭೆಗೆ ಗುರುವಾರ ಶಾಂತಿಯುತ ಮತದಾನವಾಗಿದೆ. ಒಟ್ಟು 28,015 ಮತದಾರರ ಪೈಕಿ  21,494 ಮಂದಿ ಹಕ್ಕು ಚಲಾಯಿಸಿದ್ದು, ಶೇ. 76.72ರಷ್ಟು ಮತದಾನವಾಗಿದೆ. 1, 17, 21ನೇ ವಾರ್ಡ್‌ಗಳಲ್ಲಿ ಮತದಾನ ನಿಧಾನಗತಿಯಲ್ಲಿ ನಡೆಯಿತು. ಸುದ್ದಿ ತಿಳಿದ ಚುನಾವಣಾಧಿಕಾರಿಗಳಾದ ಗೋಣಿ ಬಸಪ್ಪ, ಶರಣಪ್ಪ ವಟಗಲ್, ಕರಣಂ ಪದ್ಮನಾಭ, ಸಹಾಯಕ ಚುನಾವಣಾಧಿಕಾರಿಗಳಾದ ಎ.ಎನ್. ಸುಧಾಕರ, ಡಾ೤ ದಯಾನಂದ ಕಿನ್ನಾಳ್, ಸಣ್ಣ ವೀರಪ್ಪ ಆಗಮಿಸಿ, ಮತದಾನ ಪ್ರಕ್ರಿಯೆ ತೀವ್ರ ಗತಿಯಲ್ಲಿ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಆದರೂ ಸಂಜೆ 6 ಗಂಟೆ ವರೆಗೆ ಇಲ್ಲಿ ಮತದಾನ ನಡೆಸಬೇಕಾಯಿತು.
ಪುರಸಭೆ 23 ವಾರ್ಡ್‌ಗಳ ಚುನಾವಣೆಗೆ 26 ಮತಗಟ್ಟೆ ತೆರೆಯಲಾಗಿತ್ತು. ಎಂಸಿಸಿ ಮುಖ್ಯಸ್ಥ ಕೆ. ಬೀರಣಗಿ ಮತ್ತು ಸಿಬ್ಬಂದಿ, ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಸಿಪಿಐ ಆರ್. ಹನುಮಂತಪ್ಪ, ಪಿಎಸ್‌ಐ ಆನಂದ್ ಹಾಗು ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!