ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೂಡ್ಲಿಗಿ: ಮತ ಎಣಿಕೆಗೆ ಸಿದ್ಧತೆ

Parashurama
Updated On : 10 Mar 2013, 12:28 pm

ಕೂಡ್ಲಿಗಿ:  ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಮಾ. 11ರಂದು ನಡೆಯಲಿದ್ದು, ತಹಸೀಲ್ದಾರ್ ಜವರೇಗೌಡ ತಮ್ಮ ಸಿಬ್ಬಂದಿಯೊಂದಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಸಿದ್ಧತೆಯ ವಿವರ ನೀಡಿದರು. ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕೂಡ್ಲಿಗಿ ಹಾಗೂ ಕೊಟ್ಟೂರು ಪಟ್ಟಣ ಪಂಚಾಯತಿಗಳ ಮತ ಎಣಿಕೆ ಸೋಮವಾರ ಬೆಳಗ್ಗೆ 8ರಿಂದ ನಡೆಯಲಿದೆ. ಒಬ್ಬ ಚುನಾವಣಾಧಿಕಾರಿ, ಒಬ್ಬ ಮತಎಣಿಕೆ ಮೇಲ್ವಿಚಾರಕ, ಅವರಿಗೆ ಇಬ್ಬರು ಸಹಾಯಕರು ಇರುತ್ತಾರೆ. 15 ನಿಮಿಷಗಳಲ್ಲಿ ಒಂದು ವಾರ್ಡ್ನ ಎಣಿಕೆ ಮುಗಿಯುತ್ತದೆ. ಚುನಾವಣಾ ಆಯೋಗದ ಹಾಲೋಗ್ರಾಂ ಇರುವ ಗುರುತಿನ ಚೀಟಿ ಉಳ್ಳವರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶವಿರುತ್ತದೆ. ಪ್ರತಿ ಅಭ್ಯರ್ಥಿಗೆ ಓರ್ವ ಏಜೆಂಟ್ ಮಾತ್ರ ಪಾಲ್ಗೊಳ್ಳಬಹುದು ಎಂದರು.
ಎಣಿಕೆ ದಿನ ಪಟ್ಟಣದ ದ್ವಿಪಥ ರಸ್ತೆಯ ಒಂದು ಬದಿಯನ್ನು ತಾತ್ಕಾಲಿಕವಾಗಿ ಮುಚ್ಚಿ, ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕೂಡ್ಲಿಗಿ ಪಪಂನ 88 ಹಾಗೂ ಕೊಟ್ಟೂರು ಪಪಂನ 78 ಅಭ್ಯರ್ಥಿಗಳ ಭವಿಷ್ಯ ಸೋಮವಾರ ಬಹಿರಂಗ ಆಗಲಿದೆ. ಮತಎಣಿಕೆ ಮುಗಿದ ತಕ್ಷಣ ಚುನಾವಣೆಗೆ ಸಂಬಂದಿಸಿದ ದಾಖಲೆಗಳು, ಯಂತ್ರಗಳು, ಸಾಮಗ್ರಿಗಳನ್ನು ಜಿಲ್ಲಾ ಖಜಾನೆಗೆ ರವಾನಿಸಲಾಗುವೆಂದು ಜವರೇಗೌಡ ಹೇಳಿದರು. ಕೊಟ್ಟೂರು ಉಪ ತಹಸೀಲ್ದಾರ್ ಮಂಜುನಾಥ, ಕೂಡ್ಲಿಗಿ ಶಿರಸ್ತೇದಾರ ವಿಜಯಕುಮಾರ್, ಕಂದಾಯ ಪರಿವೀಕ್ಷರ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments