ಬಳ್ಳಾರಿ

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಲರವ

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 11
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಜೀರೋದಿಂದ 26 ಸ್ಥಾನಕ್ಕೆ ಜಿಗಿದ ಕಾಂಗ್ರೆಸ್, ಬಿಎಸ್ಸಾರ್‌ಗೆ ತವರಿನಲ್ಲೇ ತೀವ್ರ ಮುಖಭಂಗ, 30 ಸ್ಥಾನಗಳಿಂದ ಶೂನ್ಯಕ್ಕೆ ಕುಸಿದ ಕಮಲ, 10 ವರ್ಷಗಳಿಂದ ಅಭದ್ರವಾಗಿದ್ದ ಕೈ ಕೋಟೆ ಇದೀಗ ಭದ್ರ, 4ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಮಂಗಳಮುಖಿ ವಿಜಯಿ, ಜೆಡಿಎಸ್ 3 ಸ್ಥಾನದಿಂದ 1 ಸ್ಥಾನಕ್ಕೆ ಕುಸಿತ.
ಇದು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳ್ಳಾರಿಯ ಒಟ್ಟಾರೆ ಚಿತ್ರಣ. ರೆಡ್ಡಿ ಸಹೋದರರು, ಶ್ರೀರಾಮುಲು ಮುಷ್ಟಿಯಿಂದ ತನ್ನ ಭದ್ರಕೋಟೆಯನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಆರಂಭಿಕ ಯಶಸ್ಸನ್ನು ಕಾಂಗ್ರೆಸ್ ಸಾಧಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೈ ಮುಖಂಡರಲ್ಲಿ ಒಡಕಿನ ಪರಿಣಾಮದಿಂದಾಗಿ ಮಹಾನಗರ ಪಾಲಿಕೆಯಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಾಧಿಸಲು ವಿಫಲವಾಗಿತ್ತು. ಈ ಬಾರಿ ಪಕ್ಷದ ಮುಖಂಡರ ಒಗ್ಗಟ್ಟಿನಿಂದಾಗಿ ಕಾಂಗ್ರೆಸ್ 26 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ 10 ವರ್ಷದ ಬಳಿಕ ಕಾಂಗ್ರೆಸ್ ತನ್ನ ಪ್ರಾಬಲ್ಯ ಮರುಸ್ಥಾಪಿಸಲು ಪಾಲಿಕೆಯ ಮೂಲಕ ಹೆಜ್ಜೆ ಹಾಕಿದೆ.
ಜಿಲ್ಲೆಯ 10 ಸ್ಥಳೀಯ ಸಂಸ್ಥೆಗಳಲ್ಲಿ 8ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಇಷ್ಟರ ಮಟ್ಟಿಗೆ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಆ ಪಕ್ಷದ ಮುಖಂಡರೂ ಊಹಿಸಿರಲಿಲ್ಲ. ಮೈತ್ರಿ ಪರಿಸ್ಥಿತಿ ಉದ್ಭವಿಸುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ಇತ್ತು. ಈಗ ಪಾಲಿಕೆಯ 35 ಸ್ಥಾನಗಳಲ್ಲಿ 26 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಳ್ಳಾರಿ ಫಲಿತಾಂಶದ ಚಿತ್ರಣ ಬದಲಿಸಿದ್ದಾರೆ.
ಬಿಎಸ್ಸಾರ್‌ಗೆ ತೀವ್ರ ಮುಖಭಂಗ: ರಾಜ್ಯದಲ್ಲಿಯೇ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಮತದಾರರ ಒಲಿಯುತ್ತಾರೆ ಎಂಬ ಸಂದೇಶವನ್ನು ಬಳ್ಳಾರಿ ಗ್ರಾಮೀಣ ಉಪಚುನಾವಣೆಯಲ್ಲಿ ಶ್ರೀರಾಮುಲು ಅಭೂತಪೂರ್ವ ಗೆಲುವಿನಿಂದ ವೇದ್ಯವಾಗಿತ್ತು. ಆದರೆ ಅದೇ ಲೆಕ್ಕಾಚಾರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಿದ ಬಿಎಸ್ಸಾರ್‌ಗೆ ಮತದಾರ ಒಲಿದಿಲ್ಲ. ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಎಸ್ಸಾರ್ ಕಾಂಗ್ರೆಸ್ ವಿಫಲವಾಗಿದೆ.
ಬಳ್ಳಾರಿ ಪಾಲಿಕೆಯಲ್ಲಿ ಕೇವಲ 6 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಹಿನ್ನಡೆ ಸಾಧಿಸಿದೆ. ಬಳ್ಳಾರಿಯಲ್ಲಿ ಯಾರು ಏನೇ ಇದ್ದರೂ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯ ಇತ್ತು. ಇದು ಚುನಾವಣೆಯಲ್ಲಿ ಫಲಿಸದಿರುವುದು ಬಿಎಸ್ಸಾರ್‌ಗೆ ದೊಡ್ಡ ಹೊಡೆತವಾಗಿದೆ. ಅಧಿಕಾರದ ಕನಸು ನನಸಾಗಿಲ್ಲ.
-ಶಶಿಧರ ಮೇಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!