ಇಂದು ಕಾನೂನು ಕಾರ್ಯಾಗಾರ
ಹೊಸಪೇಟೆ: ಹಂಪಿ ಕನ್ನಡ ವಿವಿಯ ಮಹಿಳಾ ಅಧ್ಯಯನ ಕೇಂದ್ರ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಸ್ಥಳೀಯ ಎಸ್ಯುಬಿಎನ್, ಥಿಯೋಸಾಫಿಕಲ್ ಮಹಿಳಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಾನೂನುಗಳ ಅರಿವು ಕಾರ್ಯಾಗಾರ ಕಾರ್ಯಕ್ರಮ ನಗರದ ಥಿಯೋಸಾಫಿಕಲ್ ಮಹಿಳಾ ವಿದ್ಯಾಲಯದಲ್ಲಿ ಮಾ. 15ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.
ಸ್ಥಳೀಯ ಜೆಎಂಎಫ್ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಮಾರುತಿ ಬಾಗಡೆ ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ. ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಹಿಳಾ ಆಸ್ತಿ ಹಕ್ಕು ಕುರಿತು ವಕೀಲ ಎಂ. ಗುರುರಾಜ್ರಾವ್, ಮಹಿಳಾ ವೈವಾಹಿಕ ಸಂಬಂಧ ಕಾನೂನು ಕುರಿತು ನ್ಯಾಯಾವಾದಿ ಕೆ. ಸುನಂದಾ, ವರದಕ್ಷಿಣೆ ನಿಷೇಧ ಕಾನೂನು ಕುರಿತು ಭಾಗ್ಯಲಕ್ಷ್ಮಿ ಭರಾಡೆ, ಮಹಿಳಾ ಲೈಂಗಿಕ ದೌರ್ಜನ್ಯ ನಿಷೇಧ ಕಾನೂನು ಕುರಿತು ವಕೀಲ ಎ. ಕರುಣಾನಿಧಿ ಉಪನ್ಯಾಸ ನೀಡುವರು.
ಅಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲ ಎ. ವಿರೂಪಾಕ್ಷ ರೆಡ್ಡಿ ಸಮಾರೋಪ ಭಾಷಣ ಮಾಡುವರು. ವಕೀಲರ ಸಂಘದ ಅಧ್ಯಕ್ಷ ರತ್ನಾಕರ್ ರಾವ್ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶ ಕೃಷ್ಣಪ್ರಸಾದ್ರಾವ್ ಕಲ್ಮಾಡಿ, ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ ಹಿರೇಮಠ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.