ಮೋಕಾ ಗ್ರಾಮದಲ್ಲಿ ರೈತ ಸ್ನೇಹ ಕೂಟಗಳ ಉದ್ಘಾಟನೆ
ಬಳ್ಳಾರಿ: ತಾಲೂಕಿನ ಮೋಕಾ ಗ್ರಾಮದಲ್ಲಿ ರೈತ ಸ್ನೇಹ ಕೂಟಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ವೇಳೆ ನಬಾರ್ಡ್ ವ್ಯವಸ್ಥಾಪಕ ಎಸ್.ಕೆ.ಕೆ. ಭಾರದ್ವಾಜ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿ, ಅಧಿಕ ಇಳುವರಿ ಪಡೆಯುವುದು, ತಾಂತ್ರಿಕ ಸಮಾಲೋಚನೆ ತಿಳಿವಳಿಕೆ, ಮಣ್ಣು ಪರೀಕ್ಷೆ, ಪರಿಣಿತರಿಂದ ಸಲಹೆ, ಬೀಜ ಬದಲಾವಣೆ, ಬೀಜ ಚಿಕಿತ್ಸೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಆಶಾಕಿರಣ ಸಮಾಜ ಸೇವಾ ಸಂಘ, ನಬಾರ್ಡ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ಸಮಾಲೋಚಕ ಕೆ.ಎ. ನೀಲಕಂಠಪ್ಪ, ಸಂಘದ ಜಿಲ್ಲಾಧ್ಯಕ್ಷೆ ಜಿ. ಭಾರತಿ, ಗಂಗಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಶಕುಂತಲಾ ಆಗಮಿಸಿದ್ದರು.
ಮೋಕಾ ಸುತ್ತಮುತ್ತಲಿನ ಹೊಸಮೋಕಾ, ಅಶೋಕನಗರ ಕ್ಯಾಂಪ್, ಮಸೀದಿಪುರ, ಮಸೀದಿಪುರ ಕ್ಯಾಂಪ್, ವಣೇನೂರು, ಕರ್ಚೇಡು ಸೇರಿದಂತೆ ಒಟ್ಟು 14 ಗ್ರಾಮಗಳ ರೈತರು ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.