ಭಾರತೀಯ ಸೇನೆಯ ಪಂಡಿತ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ: ಭಾರತೀಯ ಸೇನೆಯಲ್ಲಿ ಖಾಲಿಯಿರುವ ಧಾರ್ಮಿಕ ಶಿಕ್ಷಕ (ಪಂಡಿತ, ಮೌಲ್ವಿ, ಪಾದ್ರಿ) ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 27 ರಿಂದ 34 ವರ್ಷ ವಯೋವಾನದವರಾಗಿರಬೇಕು. ಪಂಡಿತ ಹುದ್ದೆಗೆ ಪದವಿಯೊಂದಿಗೆ ಸಂಸ್ಕೃತದಲ್ಲಿ ಮಧ್ಯಮ ಅಥವಾ ಹಿಂದಿಯಲ್ಲಿ ಭೂಷಣ್ ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಬಿಎ ಪದವಿಯಲ್ಲಿ ಸಂಸ್ಕೃತ, ಹಿಂದಿ ಭಾಷೆಯನ್ನು ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಂಡು ತೇರ್ಗಡೆ ಹೊಂದಿ, ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು. ಮೌಲ್ವಿ ಹುದ್ದೆಗೆ ಪದವಿಯೊಂದಿಗೆ ಅರೇಬಿಕ್ನಲ್ಲಿ ಮೌಲ್ವಿ ಆಲಿಮ್ ಆದಮ್ ಆಲಿಮ್, ಉರ್ದುವಿನಲ್ಲಿ ಆದಿಬ್ ಆಲಿಮ್ ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಬಿಎ ಪದವಿಯಲ್ಲಿ ಅರೇಬಿಕ್, ಉರ್ದು ಭಾಷೆಯನ್ನು ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಂಡು ತೇರ್ಗಡೆ ಹೊಂದಿದ ಮುಸ್ಲಿಂ ಧರ್ಮೀಯರಾಗಿರಬೇಕು. ಪಾದ್ರಿ ಹುದ್ದೆಗೆ ಕ್ರೈಸ್ತರು ಅಭ್ಯರ್ಥಿಗಳಾಗಿದ್ದು, ಚರ್ಚಿನ ಸೂಕ್ತ ಮೇಲಧಿಕಾರಿಯಿಂದ ದೀಕ್ಷೆ ಪಡೆದಿರಬೇಕು. ಅಭ್ಯರ್ಥಿಗಳ ಹೆಸರು ಸ್ಥಳೀಯ ಬಿಷಪ್ ಪಟ್ಟಿಯಲ್ಲಿರಬೇಕು. ಅರ್ಜಿ ಸಲ್ಲಿಸುವವರು 160 ಸೆ.ಮೀ. ಎತ್ತರ, 50 ಕೆ.ಜಿ. ತೂಕ, 77 ಸೆ.ಮೀ. ಎದೆ ಸುತ್ತಳತೆ ಹೊಂದಿದ್ದು, ದೈಹಿಕ, ಮಾನಸಿಕವಾಗಿ ಸದೃಢರಾಗಿರಬೇಕು. ಅಭ್ಯರ್ಥಿಗಳ ಆಯ್ಕೆಗಾಗಿ 2013ರ ಜೂ. 30ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ನಡತೆ, ವಾಸಸ್ಥಳ ಪ್ರಮಾಣ ಪತ್ರ, ವಿದ್ಯಾರ್ಹತೆ ಅಂಕಪಟ್ಟಿ, 12 ಬಣ್ಣದ ಪಾಸ್ಪೋರ್ಟ್ ಅಳತೆ ಭಾವಚಿತ್ರ ಮತ್ತಿತರ ದಾಖಲಾತಿಗಳ ದೃಢೀಕೃತ ಪ್ರತಿಗಳ 2 ಸೆಟ್ನ್ನು ಲಗತ್ತಿಸಿರಬೇಕು. ಬಳ್ಳಾರಿ, ಬೆಳಗಾವಿ, ಬೀದರ್, ಗುಲ್ಬರ್ಗಾ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಏ. 25ರೊಳಗೆ ಹೆಡ್ಕ್ವಾರ್ಟರ್ಸ್, ರಿಕ್ರೂಟಿಂಗ್ ಝೋನ್, 148 ಫೀಲ್ಡ್ಮಾರ್ಷಲ್, ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560025ಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 080-255965515ನ್ನು ಸಂಪರ್ಕಿಸಿ.