ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಚನ ಸಾಹಿತ್ಯ ಪ್ರಚುರಪಡಿಸಬೇಕು: ವಚನ ರಂಗೋತ್ಸವದಲ್ಲಿ ಪನ್ನರಾಜ್

Mainashree
Updated On : 18 Mar 2013, 11:12 am

ಬಳ್ಳಾರಿ: ರೂಪಕಗಳ ಪ್ರಕಾರದಲ್ಲಿ ವಚನ ಸಾಹಿತ್ಯ ಪ್ರಚಾರ ಪಡಿಸಬೇಕು ಎಂದು ಲೆಕ್ಕ ಪರಿಶೋಧಕ ಸಿರಿಗೇರಿ ಪನ್ನರಾಜ್ ಅಭಿಪ್ರಾಯಪಟ್ಟರು. ಬೆಂಗಳೂರಿನ ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಚನ ಚಳುವಳಿ, ಸಾಹಿತ್ಯ ಸಂಸ್ಕೃತಿ, ವಚನ ರಂಗೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಹತ್ತಿರವಾಗುವಂತೆ ರಚನೆಯಾಗಿರುವ ಶರಣರ ವಚನಗಳು ಯುವ ಜನರನ್ನು ತಲುಪಬೇಕು. ಶಾಲಾ-ಕಾಲೇಜುಗಳಲ್ಲಿ ವಚನಗಳ ಬಗೆಗಿನ ರೂಪಕಗಳನ್ನು ಪ್ರದರ್ಶಿಸುವುದು ಅಗತ್ಯವಿದೆ ಎಂದರು. ರಂಗ ನಿರ್ದೇಶಕ ಅಣ್ಣಾಜಿ ಕೃಷ್ಣಾರೆಡ್ಡಿ ಪ್ರಾರ್ಥಿಸಿಜದರು. ಮತ್ತೋಬ್ಬ ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶ್ ಸ್ವಾಗತಿಸಿದರು. ರಂಗ ಮಂಡಲದ ಅಧ್ಯಕ್ಷ ಡಿ.ವಿ. ಮಲ್ಲಿಕಾರ್ಜುನಸ್ವಾಮಿ ಮಹಾಮನಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ ವಚನ ಸಾಹಿತ್ಯದಲ್ಲಿ ಕನ್ನಡ ಭಾಷಾ ನೆಲೆಗಳು ಎಂಬ ವಿಷಯ ಕುರಿತ ಉಪನ್ಯಾಸ ನೀಡಿದರು.  ನಾಡೋಜ ಬೆಳಗಲ್ಲು ವೀರಣ್ಣ, ಮೌನೇಶ್ ಆಚಾರ್, ನಿಷ್ಠಿ ರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಇತರರು ಇದ್ದರು. ಉಪನ್ಯಾಸಕ ನಾಗಿರೆಡ್ಡಿ ನಿರೂಪಿಸಿ, ರಂಗ ಜಂಗಮದ ಖಜಾಂಚಿ ದೊಡ್ಡಬಸಪ್ಪ ವಂದಿಸಿದರು. ನಂತರ ರಂಗಜಂಗಮ ತಂಡದಿಂದ ಗಣೇಶ ನಿರ್ದೇಶನದ ಅರಿವು  ನಾಟಕ ಪ್ರದರ್ಶನವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement