ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಭ್ರಮದ ಹನುಮಪ್ಪ ರಥೋತ್ಸವ

Mainashree
Updated On : 18 Mar 2013, 11:11 am

ಹೂವಿನಹಡಗಲಿ: ಇಲ್ಲಿನ ತೇರು ಹನುಮಪ್ಪ ಸ್ವಾಮಿ ರಥೋತ್ಸವ ಶನಿವಾರ ಸಕಲ ವಾದ್ಯಗಳೊಂದಿಗೆ ಸಡಗರ-ಸಂಭ್ರಮದಿಂದ ನಡೆಯಿತು. ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀರಾಮ ದೇವಸ್ಥಾನದ ಧರ್ಮಕರ್ತ ರಾಮಸ್ವಾಮಿ ವೆಂಕಟೇಶಯ್ಯ ಅವರ ಸಮ್ಮುಖದಲ್ಲಿ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಲಾಯಿತು. ನಿಶಾನೆ ಹರಾಜು ಪ್ರಕ್ರಿಯೆ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಭಕ್ತರು ತೇರು ಎಳೆದು ಪುನೀತರಾದರು. ದೇವಸ್ಥಾನ ಆವರಣದಲ್ಲಿ ಅಪಾರ ಜನಸ್ತೋಮದ ನಡುವೆ ಮದ್ದು ಸುಡುವ ಕಾರ್ಯಕ್ರಮ ಜರುಗಿತು. ಬಾನಂಗಳಕ್ಕೆ ಸಿಡಿದ ಬಗೆಬಗೆಯ ಪಟಾಕಿ ಬೆಳಕಿನ ಚಿತ್ತಾರಗಳು ನೋಡುಗರ ಗಮನ ಸೆಳೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement