ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಲೋಕಕಲ್ಯಾಣಕ್ಕಾಗಿ 108 ಪವಮಾನ ಹೋಮ

Mainashree
Updated On : 19 Mar 2013, 10:36 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 18
ತಾಲೂಕಿನ ತುಂಗಭದ್ರೆ ತಟದಲ್ಲಿರುವ ಮದಲಗಟ್ಟಿ ಸುಕ್ಷೇತ್ರದ ಪ್ರಾಣದೇವರ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ 108 ಪವಮಾನ ಹೋಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ತಾಲೂಕಿನ ಮದಲಗಟ್ಟಿ ಕ್ಷೇತ್ರದಲ್ಲಿ ಜ್ಞಾನಸತ್ರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಣದೇವರು ಯಾವೊಂದು ಕುಲಗೋತ್ರಕ್ಕೆ ಸೀಮಿತವಾಗಿಲ್ಲ, ಸಕಲ ಜೀವರಾಶಿಗಳಿಗೆ ಸಲಹುವಂಥ ಆಂಜನೇಯ ಅನಾದಿ ಕಾಲದಿಂದಲೂ ಪರಿಪೂರ್ಣ ಜ್ಞಾನಿಯಾಗಿದ್ದು, ನಮ್ಮ ಇಷ್ಟಾರ್ಥ ಈಡೇರಿಸುತ್ತಾನೆ. ಆದ್ದರಿಂದ ನಿತ್ಯ ದೇವರ ನಾಮ ಸ್ಮರಣೆ ಮಾಡಿ ಎಂದರು.
ವೈಯಕ್ತಿಕ ಜೀವನದಲ್ಲಿ ಯಾವುದೇ ಕಾರ್ಯ ಮಾಡುವಾಗ ಪ್ರಾಣದೇವರಿಗೆ ಮೊರೆ ಹೋಗುವುದು, ದೇವರು ಕೊಟ್ಟ ಇಂದ್ರಿಯಗಳನ್ನು ಕಾಪಾಡಿಕೊಳ್ಳಿ, ಜೀವನದಲ್ಲಿ ನಿರಂತರವಾದ ಉತ್ತಮ ಸಾಧನೆ ಮಾಡಿರಿ. ಪ್ರತಿಯೊಂದಕ್ಕೂ ಗುರುಗಳ ಮಾರ್ಗದರ್ಶನ ಬೇಕು ಎಂದು ಹೇಳಿದರು. ಕೊರ್ಲಹಳ್ಳಿ ನರಸಿಂಹಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನೂರಾರು ವಿದ್ವಾಂಸರು ಇದ್ದ ಸ್ಥಳ, ಗುರುಗಳ ಪರಂಪರೆಯ ದಿನನಿತ್ಯ ಪಾಠ, ಪ್ರವಚನ ಹೇಳುವುದು ಆಗಿತ್ತು ಎಂದರು.
ಧಾರ್ಮಿಕ ಜಾಗೃತಿಯಾಗಬೇಕು: ಜ್ಞಾನಸತ್ರ ಸಮಿತಿಯ ಅಧ್ಯಕ್ಷ ವಿದ್ವಾನ್ ಡಾ. ವೆಂಕಟೇಶಾಚಾರ್ ಮಾತನಾಡಿ, ಸಮಾಜದಲ್ಲಿ ಜ್ಞಾನವೃದ್ಧಿಯಾಗಬೇಕು. ನಮ್ಮ ಪರಂಪರೆ ಧಾರ್ಮಿಕ ಜಾಗೃತಿಯಾಗಬೇಕು. ಮದಲಗಟ್ಟಿ ಪ್ರಾಣದೇವರು ಮಾತನಾಡುವ ದೇವರೆಂದ ಅವರು, ಸ್ವಾಮಿ ರಾಯಾಚಾರ್ ಸಿಂಗಟಾಲೂರು-ಉಡುಪಿ ಆಚಾರ್ ಇವರಿಗೆ ಪ್ರೇರಣೆಯಾಗಿತ್ತು. ಮದಲಗಟ್ಟಿ ಪ್ರಾಣದೇವರು ಜನಮೇಜಯ ಜಯರಾಯರ, ವ್ಯಾಸರಾಯರ, ಗುರುಸಾರ್ವಭೌಮರ ಪ್ರತಿಷ್ಠಾಪನೆ ಮಾಡಿದ್ದಾರೆ. ನಾಡಿನ ಎಲ್ಲ ಭಕ್ತರು ಪ್ರಾಣದೇವರನ್ನು ಸ್ಮರಿಸಿದವರು ಸರ್ವಸಮರ್ಥರು ಎಂದರು.
ಇದಕ್ಕೂ ಮುನ್ನ ಶೋಭಾಯಾತ್ರೆಯು ಕೊರ್ಲಹಳ್ಳಿ ಕ್ಷೇತ್ರದ ಶ್ರೀ ಸತ್ಯವೀರ ಸ್ವಾಮಿಗಳ ಮಠದಿಂದ ಮದಲಗಟ್ಟಿ ಕ್ಷೇತ್ರದ ಶ್ರೀ ಪ್ರಾಣರಾಜ ಸನ್ನಿಧಿಯವರೆಗೆ ಸಾಗಿ ಶ್ರೀ ಸತ್ಯಾತ್ಮತೀರ್ಥರನ್ನು ಸ್ವಾಗತಿಸಲಾಯಿತು. ಉಡುಪಿಯ ಚಂಡೆ ವಾದನ, ಶಿವಮೊಗ್ಗದ ಸನಾಚಿ ವಾದನ, ಶ್ರೀರಂಗದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಾ, ಶೋಭಾಯಾತ್ರೆ ಸಂಭ್ರಮದಿಂದ ಸಾಗಿತು. ಶ್ರೀ ಮದಲಗಟ್ಟಿ ಪ್ರಾಣದೇವರ ಉತ್ಸವ ಸಮಿತಿ, ಪ್ರಾಣಸತ್ರಾಣ ವಾಜ್ಞೆಯ ಸಮಿತಿ ಅಧ್ಯಕ್ಷ ಡಾ. ವೆಂಕಟೇಶಾಚಾರ್ ಸ್ವಾಗತಿಸಿದರು. 108 ಪವಮಾನ ಹೋಮ, ವಾಯುಸ್ತುತಿ, ನರಸಿಂಹ ಹೋಮ ಜರುಗಿದವು.
ವೈಯಕ್ತಿಕ ಜೀವನದಲ್ಲಿ ಯಾವುದೇ ಕಾರ್ಯ ಮಾಡುವಾಗ ಪ್ರಾಣದೇವರಿಗೆ ಮೊರೆ ಹೋಗಿ, ದೇವರು ಕೊಟ್ಟ ಇಂದ್ರಿಯಗಳನ್ನು ಕಾಪಾಡಿಕೊಳ್ಳಿ. ಜೀವನದಲ್ಲಿ ನಿರಂತರವಾಗಿ ಉತ್ತಮ ಸಾಧನೆ ಮಾಡಿರಿ. ಪ್ರತಿಯೊಂದಕ್ಕೂ ಗುರುಗಳ ಮಾರ್ಗದರ್ಶನ ಪಡೆಯಿರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement