ವಿಜೃಂಭಣೆಯ ಕನಕ ದುರ್ಗಮ್ಮ ಸಿಡಿ ಬಂಡಿ ಉತ್ಸವ
ಬಳ್ಳಾರಿ: ನಗರದ ಅಧಿದೇವತೆ ಕನಕ ದುರ್ಗಮ್ಮ ಸಿಡಿ ಬಂಡಿ ಉತ್ಸವ ಸಾವಿರಾರು ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ನಡೆಯಿತು. ಭಕ್ತರು ಜೀವಂತ ಕೋಳಿ, ಹೂ, ಬಾಳೆಹಣ್ಣುಗಳನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು.
ಸಿಡಿಬಂಡಿ ಉತ್ಸವದ ಅಂಗವಾಗಿ ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಿಗೆ ಬಂಗಾರ ಆಭರಣದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಲಡ್ಡು, ಪೊಂಗಲ್ ಹಂಚಿಕೆ: ಶ್ರೀ ರಾಘವೇಂದ್ರ ಎಂಟರ್ಪ್ರೈಸೆಸ್ ಮಾಲೀಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ನಾರಾ ಸೂರ್ಯ ನಾರಾಯಣ ರೆಡ್ಡಿ, ಟಚ್ ಫಾರ್ ಲೈಫ್ ಫೌಂಡೇಶನ್ ಸಂಸ್ಥಾಪಕ ನಾರಾ ಭರತ್ರೆಡ್ಡಿ ಭಕ್ತರಿಗೆ ಪೊಂಗಲ್, ಲಡ್ಡು ವಿತರಿಸಿದರು.
ಸಿಡಿಬಂಡಿಗೆ ಶಾಸಕರಿಂದ ಪೂಜೆ: ಉತ್ಸವದ ಮೊದಲ ದಿನವಾದ ಸೋಮವಾರ ಸಂಜೆ ಕೆಎಂಎಫ್ ರಾಜ್ಯಾಧ್ಯಕ್ಷ, ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಗಾಣಿಗರ ಓಣಿಯಲ್ಲಿ ಸಿಡಿಬಂಡಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.