ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 20 Mar 2013, 10:37 am

ನದಿಗೆ ನೀರು: ಎಚ್ಚರಿಕೆ
ಬಳ್ಳಾರಿ:
ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಮಾ. 18ರಿಂದ ಪ್ರತಿದಿನ 300 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನೂ 4 ದಿನ ಇದೇ ಪ್ರಮಾಣದಲ್ಲಿ ನೀರನ್ನು ಬಿಡುವುದಾಗಿ ತುಂಗಭದ್ರಾ ಮಂಡಳಿ ನಿರ್ಧರಿಸಿದೆ. ನದಿ ತೀರದ ಪ್ರದೇಶದ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಯುವತಿ ಕಾಣೆ: ದೂರು
ಬಳ್ಳಾರಿ:
ಮಿಲ್ಲರ್ ಪೇಟೆಯ ಯುವತಿ ಮಾ. 15ರಿಂದ ಕಾಣೆಯಾಗಿದ್ದಾಳೆ ಎಂದು ಬ್ರೂಸ್ಪೇಟೆ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಫಾ ಎ ಹುರ್ ಎನ್ನುವ  21 ವರ್ಷದ ಯುವತಿ ಕಾಣೆಯಾಗಿದ್ದು, 5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಅಗಲವಾದ ಮೂಗು, ಅಗಲವಾದ ಹಣೆ, ಗೋದಿ ಮೈಬಣ್ಣ ಹೊಂದಿರುವ ಈಕೆ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು ಭಾಷೆಯನ್ನು ಮಾತನಾಡಬಲ್ಲಳು. ಮಾ. 15ರ ಸಂಜೆ 5 ಗಂಟೆಗೆ ತನ್ನ ಗೆಳತಿಯ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಈ ವರೆಗೆ ಹಿಂದಿರುಗಿಲ್ಲ ಎಂದು ಆಕೆಯ ತಂದೆ ಸಿ. ನಿಯಾಜ್ ಅಹಮದ್ ದೂರು ನೀಡಿದ್ದಾರೆ. ಸುಳಿವು ದೊರೆತರೆ ಕಂಟ್ರೋಲ್ ರೂಂ, ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಪ್ರಕಟಣೆ ತಿಳಿಸಿದೆ.
ಅಪಘಾತ: ಬೈಕ್ ಸವಾರ ಸಾವು
ಸಂಡೂರು:
ಬುಲೆರೋ ವಾಹನವೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ದೋಣಿಮಲೈ ಸಮೀಪದ ನೆಹರು ಪಾರ್ಕ್ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಆಂಧ್ರಪ್ರದೇಶದ ಮೇಹಬೂಬ್‌ನಗರದ ನಿವಾಸಿ ಅಜಯ್‌ಸಾಗರ್ (22) ಎಂದು ಗುರುತಿಸಲಾಗಿದೆ. ದಾಸ್ ಎಂಜಿನಿಯರಿಂಗ್ ಕಂಪನಿಯಲ್ಲಿ ನೌಕರನಾಗಿ ಈತನು ಕರ್ತವ್ಯ ನಿರ್ವಹಿಸುತ್ತಿದ್ದನು. ತನ್ನ ಮೊಬೈಲ್‌ಗೆ ಕರೆನ್ಸಿ ಹಾಕಿಸಲು ಬೈಕ್‌ನಲ್ಲಿ ದೋಣಿಮಲೈಗೆ ಬರುತ್ತಿರುವಾಗ ಅಲ್ಲಿನ ನೆಹರು ಪಾರ್ಕ್ ಬಳಿ ಎದುರಿನಿಂದ ಬಂದ ಬುಲೆರೋ ಕ್ಯಾಂಪರ್ ಗಾಡಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ಗಾಯಗೊಂಡ ಅಜಯ್‌ಸಾಗರನನ್ನು ದೋಣಿಮಲೈನ ಯಶೋಧ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement