ಕಳ್ಳರ ಸೆರೆ: 2 ಟೈರ್ ವಶ
ಹೊಸಪೇಟೆ: ಟೈರ್ ಕಳ್ಳರಿಬ್ಬರನ್ನು ಬಂಧಿಸಿರುವ ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಅವರಿಂದ ರು. 38 ಸಾವಿರ ಮೌಲ್ಯದ ಎರಡು ಟೈರ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಕಾರಿಗನೂರು ನಿವಾಸಿ ಅಂಬರೀಷ ಅಲಿಯಾಸ್ ಅಂಬರಿ ಹಾಗೂ ಸಿರಸನಕಲ್ಲು ನಿವಾಸಿ ಖಾಜಾವಲಿ ಬಂಧಿತರು. ಕೆಲವು ದಿನಗಳ ಹಿಂದೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಮೀರ್ ಅಲಂ ದರ್ಗಾದ ಬಳಿ ಲಾರಿಯೊಂದರ ಟೈರ್ಗಳು ಕಳ್ಳತನವಾಗಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬಳ್ಳಾರಿ ರಸ್ತೆಯ ಸಿರಿಸನಕಲ್ಲಿನಲ್ಲಿ ದಾಳಿ ನಡೆಸಿದ ಪೊಲೀಸರು, ಆರೋಪಿಗಳು ಮನೆಯಲ್ಲಿಟ್ಟಿದ್ದ ಟಿಪ್ಪರ್ ಲಾರಿಯ ಡಿಸ್ಕ್ ಇರುವ ಎರಡು ಟೈರ್ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಗ್ರಾಮೀಣ ಠಾಣೆಯ ಪಿ.ಐ. ರಘು ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಶಾಂತಪ್ಪ, ಎಎಸ್ಐ ವಿ.ಡಿ. ಜೋಷಿ ಮತ್ತು ಮಹಮ್ಮದ್ ರಫಿ, ಕೋರಿ ಕೃಷ್ಣ, ಕುಮಾರಸ್ವಾಮಿ, ವೀರೇಶ್, ನಾಗರಾಜು, ಬಿ. ಫಣಿರಾಜ್ ಇತರರು ಪಾಲ್ಗೊಂಡಿದ್ದರು.