ಗುಡಿಸಲಿಗೆ ಬೆಂಕಿ: ರು. 2 ಲಕ್ಷ ಹಾನಿ
ಕೊಟ್ಟೂರು: ಅಡುಗೆ ಮಾಡುವ ಸಂದರ್ಭದಲ್ಲಿ ಒಲೆಯಲ್ಲಿದ್ದ ಬೆಂಕಿ ಒಮ್ಮೆಲೆ ಭುಗಿಲೆದ್ದು ಗುಡಿಸಲಿಗೆ ಹತ್ತಿಕೊಂಡ ಪರಿಣಾಮ ಸಂಪೂರ್ಣ ಗುಡಿಸಲು ಭಸ್ಮಗೊಂಡ ಘಟನೆ ಸಮೀಪದ ಮೋತಿಕಲ್ ತಾಂಡದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಬೆಂಕಿ ಅನಾಹುತದಲ್ಲಿ ರು. 2 ಲಕ್ಷಕ್ಕೂ ಅಧಿಕ ಮೌಲ್ಯದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮೋತಿಕಲ್ ತಾಂಡದ ಚಂದ್ರಿಬಾಯಿಗೆ ಸೇರಿದ ಈ ಮನೆಯಲ್ಲಿದ್ದ ಜೋಳ, ಅಕ್ಕಿ, ಗೋದಿ, ಬಂಗಾರ, ಬೆಳ್ಳಿ, ಆಭರಣಗಳು ಈ ಅವಘಡದಲ್ಲಿ ಭಸ್ಮಗೊಂಡು ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಕೊಟ್ಟೂರಿನ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.