ಡಿಸಿ ಕ್ರಮ ಖಂಡನೀಯ: ಹೇಮಂತ್ಕುಮಾರ್
ಹೂವಿನಹಡಗಲಿ: ಬಳ್ಳಾರಿ ನಗರದ ಪಾದಚಾರಿ ರಸ್ತೆಯಲ್ಲಿನ ಚಿಲ್ಲರೆ ವ್ಯಾಪಾರಿಗಳ ತೆರವು ಕಾರ್ಯ ಕೈಗೊಂಡಿರುವ ಡಿಸಿ ಕ್ರಮ ಸರಿಯಾದುದಲ್ಲ ಎಂದು ಬಿಎಸ್ಸಾರ್ ಮುಖಂಡ ಹೇಮಂತ್ಕುಮಾರ ಭಾರತಿ ಎಂದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವಾಗ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಕೆಲ ರಾಜಕೀಯ ಪಕ್ಷಗಳು ಇದನ್ನು ಬಳಕೆ ಮಾಡಿಕೊಳ್ಳುತ್ತಾರೆಂದು ಹೇಳಿದರು.
ಮಹಾನಗರ ಪ್ರದೇಶಗಳ ಪಾದಚಾರಿ ರಸ್ತೆಗಳಲ್ಲೇ ಚಿಲ್ಲರೆ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ, ಇಂತಹ ಬದುಕನ್ನು ಜಿಲ್ಲಾಧಿಕಾರಿ ಕಿತ್ತುಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳಾದ ದರ್ಪದಿಂದ ವರ್ತಿಸದೆ, ಆ ವ್ಯಾಪಾರಿಗಳಿಗೆ ಬೇರೆಡೆಗೆ ಸ್ಥಳಾವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.