ಗಂಜಿ ಪಾತ್ರೆ ಬಿದ್ದು ಬಾಲಕಿ ಸಾವು
ಬಳ್ಳಾರಿ: ಬಿಸಿಯಾದ ಅನ್ನದ ಗಂಜಿ ಪಾತ್ರೆ ನಾಲ್ಕು ವರ್ಷದ ಮಗುವಿನ ಮೇಲೆ ಬಿದ್ದ ಪರಿಣಾಮ ಮಗುವು ಮೃತ ಪಟ್ಟಿರುವ ಘಟನೆ ನಗರದ ಅನಂತಪುರ ರಸ್ತೆಯ ಜನತಾನಗರದಲ್ಲಿ ನಡೆದಿದೆ. ಮೃತಳನ್ನು 4 ವರ್ಷದ ಬಾಲಕಿ ರಜನಿ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಪತ್ತಿಕೊಂಡು ತಾಲೂಕಿನ ಈಗಲದೇವರಬಂಡ ಗ್ರಾಮದವರಾದ ವೆಂಕಟೇಶ್ವರಿ ಅವರು, ಬಳ್ಳಾರಿಯ ತವರು ಮನೆಗೆ ಬಂದಾಗ ಮಾ. 14ರಂದು ಮನೆಯಲ್ಲಿ ಅನ್ನದ ಗಂಜಿಯ ಪಾತ್ರೆಗೆ ರಜನಿ ಕೈಹಾಕಿದ್ದರಿಂದ ಸುಟ್ಟುಗಾಯಗಳಾಗಿತ್ತು, ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾಳೆ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.