ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಚುನಾವಣಾ ಚಿತ್ರೀಕರಣ ಬಾಕಿ ಪಾವತಿಗೆ ಆಗ್ರಹ

Rashmi Kasaragodu
Updated On : 26 Mar 2013, 11:00 am

ಹಗರಿಬೊಮ್ಮನಹಳ್ಳಿ:  ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಚಿತ್ರೀಕರಣ ನಡೆಸಿದ ಬಾಕಿ ಪಾವತಿಸಿ, ಪ್ರಸಕ್ತ ವಿಧಾನಸಭಾ ಚುನಾವಣಾ ಚಿತ್ರೀಕರಣ ಕೆಲಸವನ್ನು ಸ್ಥಳೀಯರಿಗೆ ನೀಡುವಂತೆ ಒತ್ತಾಯಿಸಿ ಮತ್ತು ಹೊರಗಿನ ಜಿಲ್ಲೆಯವರಿಗೆ ಆದ್ಯತೆ ನೀಡುವುದನ್ನು ಖಂಡಿಸಿ ತಾಲೂಕು ಪೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಮತ್ತು ಸ್ಟುಡಿಯೋ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಮಧ್ಯಾಹ್ನ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್.ಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲೂಕಾಧ್ಯಕ್ಷ ಪೋಟೋ ರಾಮಣ್ಣ ಮಾತನಾಡಿ, 2009ರ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನ ಎಲ್ಲ ಪೋಟೋ, ವಿಡಿಯೋಗ್ರಾಫರ್ಸ್ ಮತ್ತು ಸ್ಟುಡಿಯೋ ಮಾಲೀಕರು ಚುನಾವಣೆ ಕಾರ್ಯ ನಿರ್ವಹಿಸಿದ ಹಣ ರು. 2,69,200 ಬಾಕಿ ಇದ್ದು, ಚುನಾವಣೆ ಮುಗಿದು ನಾಲ್ಕು ವರ್ಷ ಆದರೂ ಇನ್ನೂ ಪಾವತಿಯಾಗಿಲ್ಲ. ಸಾಲ ಮಾಡಿ ನಾವು ಎಲೆಕ್ಷನ್ ಕಾರ್ಯನಿರ್ವಹಿಸಿದ್ದೇವೆ. ಬಾಕಿ ಹಣ ನೀಡುವಂತೆ ಈಗಾಗಲೇ ನೂರಾರು ಬಾರಿ ಮನವಿ ಮಾಡಿಕೊಂಡರೂ ಜಿಲ್ಲಾಡಳಿತ ಬಾಕಿಯನ್ನು ಪಾವತಿಸಿಲ್ಲ. ಜಿಲ್ಲಾಧಿಕಾರಿಗಳು ತಕ್ಷಣವೇ ನಮ್ಮ ಸಮಸ್ಯೆಗೆ ಸ್ಪಂದಿಸಿ, ಬಾಕಿ ಹಣವನ್ನು ಕೂಡಲೇ ಪಾವತಿಸುವ ಮೂಲಕ ಬಡ ಪೋಟೋ, ವಿಡಿಯೋಗ್ರಾಫರ್ಸ್.ರನ್ನು ಸಾಲದಿಂದ ಮುಕ್ತಗೊಳಿಸಿ ಅವರ ಬದುಕಿಗೆ ನೆಲೆ ಒದಗಿಸಬೇಕೆಂದು ಮನವಿ ಮಾಡಿಕೊಂಡರು.
ಯಾವ ನ್ಯಾಯ?: ನಾಲ್ಕು ವರ್ಷಗಳಿಂದ ಬಾಕಿ ಹಣಕ್ಕಾಗಿ ನಾವು ಹೋರಾಟ ಮಾಡುತ್ತ ಬರುತ್ತಿದ್ದೇವೆ. ಇತ್ತ ಈ ಸಲದ ವಿಧಾನಸಭಾ ಚುನಾವಣೆಯ ಚಿತ್ರೀಕರಣ ಕಾರ್ಯವನ್ನು ಸ್ಥಳೀಯರಿಗೆ ನೀಡುವ ಬದಲು ಹೊರಗಿನ ಜಿಲ್ಲೆಯವರಿಗೆ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಅನುವು ಮಾಡಿಕೊಡುವ ಸುದ್ದಿಗಳು ಈಗಾಗಲೇ ಬಂದಿವೆ. ಸ್ಥಳೀಯರಿಗೆ ಕೆಲಸ ನೀಡದೆ ಹೊರಗಿನ ಜಿಲ್ಲೆಯವರಿಗೆ ಕೆಲಸ ನೀಡುವುದು ಯಾವ ನ್ಯಾಯ? ಎಂದು ರಾಮಣ್ಣ ಪ್ರಶ್ನಿಸಿದರು.
ಈ ಹಿಂದೆ ಜರುಗಿದ ಪದವೀಧರ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ಸಮಯದಲ್ಲೂ ಸ್ಥಳೀಯರಿಗೆ ಕೆಲಸ ನೀಡದೆ ದೂರದ ಚಿತ್ರದುರ್ಗ ಜಿಲ್ಲೆಯವರಿಗೆ ಕಾರ್ಯವನ್ನು ನೀಡುವ ಮೂಲಕ ಸ್ಥಳೀಯರನ್ನು ನಿರ್ಲಕ್ಷಿಸಲಾಗಿತ್ತು. ಈ ಸಲವೂ ಅದೇ ನೀತಿಯನ್ನು ಜಿಲ್ಲಾಡಳಿತ ಮುಂದುವರಿಸಿದ್ದು, ಕೂಡಲೇ ಇದನ್ನು ಬಿಟ್ಟು ಸ್ಥಳೀಯರಿಗೆ ಚುನಾವಣಾ ಚಿತ್ರೀಕರಣ ಕೆಲಸವನ್ನು ನೀಡುವಂತೆ ಅವರು ಆಗ್ರಹಿಸಿದರು.
ಸಂಘದ ಹಿರಿಯ ಮುಖಂಡ ಬಸಣ್ಣ, ರಂಗಾರಿ ರಮೇಶ, ಪೂಜಾರ ಸಂತೋಷ, ಬಾರಿಕೇರ ಶೇಖರ, ರುದ್ರಮುನಿ, ಜಿ.ಟಿ. ಮಹೇಶ, ಹಳಊೇರು ರಾಘು, ಚಿಲುಗೋಡ ಶೇಖರ, ಎಂ.ಬಿ. ಕಾಲೋನಿ ರಾಘು, ವೀರೇಶ, ಶಿವು ನಾಯ್ಕ್, ಕೊಟ್ರೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement